Skip to main content

Posts

Showing posts from July, 2018

ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.

*ಕುರುಬ ಕುಲದೊಳಗೊಬ್ಬ ಧರಣಿ ಪಾಲಕ_ಹುಟ್ಟಿ* *ಉರವಣಿಸಿ_ಧರಣಿಯೋಳು ಕದನ ಪೆಚ್ಚಲು* *ಹಂಪಿಯಲಿ ಕರಿಯ ಕಟ್ಟಿದರು ಸವ೯ಜ್ಞ* 🚩🕉🚩🕉🚩🕉🚩 ಈ ದಿನ ಇತಿಹಾಸದ ಪುಟದೊಳಗೆ ಹೊಸ ಅದ್ಭುತ ಸೃಷ್ಟಿಯಾದ ದಿನ. ಸಮಸ್ತ ಭಾರತವನ್ನು ಒಗ್ಗೂಡಿಸಿ ಬೃಹತ್ ಸಾಮ್ರಾಜ್ಯ ಕಟ್ಟಲು ಆದಿಯಾದ ದಿನ. ಭವಿಷ್ಯದ ವಿಜಯನಗರ ಸಾಮ್ರಾಜ್ಯಕ್ಕೆ  ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ. 🕉🚩🕉🚩🕉🚩🕉 ಹಕ್ಕ,ಬುಕ್ಕ,ಮುದ್ದಣ್ಣ,ಮಾರಪ್ಪ,ಕಂಪಣ್ಣ ಎಂಬ ಐವರು ಕುರಿಗಾಹಿ ಸಹೋದರರು. ಅವರಲ್ಲಿ ಹಕ್ಕಬುಕ್ಕರು ಪ್ರಭಲ ಪರಾಕ್ರಮಿಗಳು ಶಿವಭಕ್ತರು. ಅವರಿಂದ ಪ್ರಾರಂಭವಾದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ!. ವಿಜಯನಗರ ಕಟ್ಟಿದ ವೀರ ಕುರುಬರಾದ ಹಕ್ಕಬುಕ್ಕರನ್ನು ಇತ್ತೀಚೆಗೆ ಕೆಲವು ಬು(ಲ)ದ್ಧಿ ಜೀವಿಗಳು ಬೇಡರನ್ನಾಗಿ,ಬ್ರಾಹ್ಮಣರನ್ನಾಗಿ ಮಾಡಲು ತಮಗೆ ತಿಳಿದಂತೆ ಅಧ್ಯಯನ ಮಾಡಿದ್ದು ವಿಪಯಾ೯ಸವೇ ಸರಿ. ಆದರೆ ಅಂದಿನ ಶಾಸನಗಳನ್ನು,ದೇವಸ್ಥಾನಗಳನ್ನು,ಜನಪದರನ್ನು ಇವರು ಹೈಜಾಕ್ ಮಾಡಲು ಸಾಧ್ಯವೇ ಇಲ್ಲ. ಅದೇನೆ ಇರಲಿ ಆದರೆ ಇಡೀ ಭಾರತ ದೇಶ ಅರಬ್ ದಿಂದ ಬಂದವರಿಂದ ನಾಶವಾಗುತ್ತಿತ್ತು ಅಂತಹ ಸಂದಭ೯ದಲ್ಲಿ ದೇಶ,ಧಮ೯ದ ರಕ್ಷಣೆ ಮಾಡಲು ಕಂಕಣ ಕಟ್ಟಿ ನಿಂತವರು ಹಕ್ಕ ಬುಕ್ಕರು. 🚩🕉🚩🕉🚩🕉🚩 ಹಕ್ಕಬುಕ್ಕರು ಕುರುಬರು ಎಂದರೆ ಕೆಲವರಿಗೆ ಸಹಿಸಲಸಾಧ್ಯ ಉರಿ! ಆದರೆ ಅಂತವರು ಗಮನಿಸಬೇಕಾದದ್ದು ಏನೆಂದರೆ. *ಕುರುಬರು ಎಂದರೆ ಕೇವಲ ಕುರಿ ಕಾಯುವ ವೃತ್ತ...

ಇದೊಂದು ಐತಿಹಾಸಿಕ ದಿನ.. ಐತಿಹಾಸಿಕ ಸಭೆ.

ಇದೊಂದು ಐತಿಹಾಸಿಕ ದಿನ.. ಐತಿಹಾಸಿಕ ಸಭೆ. ------------------------------------------------- ಕುರುಬ ಸಮಾಜದಲ್ಲಿ ಸ್ವಯಂ ಪ್ರೇರಿತರಾಗಿ ರಾಜ್ಯದ ವಿವಿಧೆಡೆಯಿಂದ ಕುರುಬರ ಶಕ್ತಿಕೇಂದ್ರ ಶ್ರೀಕನಕಗುರುಪೀಠದಲ್ಲಿ ಕೂತು "ಎಸ್.ಟಿ. ಮೀಸಲಾತಿಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅತ್ಯುತ್ತಮ ಸಂದೇಶವನ್ನು ಪಡೆದಂತಹ ಎಲ್ಲಾ ನಮ್ಮ ಬಂಧುಗಳಿಗೆ ಕರ ಜೋಡಿಸಿ ವಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಕುರುಬರಿಗೆ ಎಸ್. ಟಿ. ಮೀಸಲಾತಿ ಬೇಕು ಎಂಬ ಕೂಗನ್ನು ಸರ್ಕಾರಕ್ಕೆ ಮುಟ್ಟುವಂತೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಹಾಸಭಾ ಮಾಡುತ್ತಲೇ ಇದೆ. ಸಂವಾದ, ಜನಾಭಿಪ್ರಾಯ ಸಭೆಗಳು, ಸಮಾವೇಶ, ಧರಣಿ, ಸರ್ಕಾರದ ಜೊತೆ ಮಾತುಕತೆ. ಅಟ್ರಾಸಿಟಿ ದೌರ್ಜನ್ಯದ  ಮುಕ್ತಿಗಾಗಿ ಸರ್ಕಾರ ಕೇಳಿದ್ದ ದಾಖಲೆಗಳನ್ನು ನೀಡಲಾಗಿತ್ತು. ಮುಂದುವರೆದು ಇಂದು ಎಸ್.ಟಿ. ಮೀಸಲಾತಿ ಬೇಡಿಕೆಯ ಹೋರಾಟಗಳನ್ನು ತೀವ್ರಗೊಳಿಸಲು ಗುರಿಮುಟ್ಟುವ ಸಂಕಲ್ಪ ಮಾಡಲಾಗಿದೆ. 1) ಬೀದರ್ 2) ಯಾದಗಿರಿ 3) ಕಲಬುರಗಿ ಮೂರು ಜಿಲ್ಲೆಗಳ ಎಸ್.ಟಿ. ಶಿಫಾರಸ್ಸುನ್ನು ಶೀಘ್ರವಾಗಿ ಅನುಮೋದನೆ ಮಾಡಿಸಲು ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ಹಲವು ನಿರ್ಣಯಗಳನ್ನು ಮಾಡಲಾಗಿದ್ದು..ರೂಪುರೇಷಗಳು ಮುಂದಿನ ದಿನಗಳಲ್ಲಿ ಸಮಾಜದ ಮುಂದೆ ತಿಳಸಿಸಲಾಗುವುದು ಸಮಾಜ ಒಂದುಗೂಡಿದರೆ ನಮ್ಮ ಎಸ್.ಟಿ. ಮೀಸಲಾತಿ ಹಕ್ಕನ್ನು ನಾವು ಪಡೆದೇ ತೀರುತ್ತೇವೆ. "ಇದು ಸ್ವಾಭಿಮಾನಿ ಕುರುಬರ ಸಂಕಲ್ಪ" - ಮ...

ಎಸ್.ಟಿ ಮಿಸಲಾತಿಗಾಗಿ ಮತ್ತೊಮ್ಮೆ ಸಿಡಿದೆದ್ದ ಕುರುಬರು

🚩🚩ಕುರುಬ ಸಮಾಜದ ಪರವಾಗಿ ಎಸ್.ಟಿ. ಮೀಸಲಾತಿ ಗಾಗಿ ಹೋರಾಟ ಪೂರ್ವಭಾವಿ ಸಭೆಯನ್ನ  ಹರಿಹರ ತಾಲ್ಲೂಕು.ಬೆಳ್ಳೊಡಿ ಕನಕ ಶಾಖಾ ಮಠದಲ್ಲಿ ಸಭೆ ಕರೆಯಲಾಗಿತ್ತು🚩🚩 ಸತತ 25 ವರ್ಷಗಳಿಂದಲೂ ಕುರುಬರು ಎಸ್.ಟಿ ಮಿಸಲಾತಿಗಾಗಿ ಧ್ವನಿ ಎತ್ತುತ್ತ ಹೋರಾಟ ನಡೆಸುತ್ತಿದ್ದರು ಯಾವುದೇ ಸರ್ಕಾರಗಳು ಬೇಡಿಕೆ ಈಡೇರಿಸಲು ರೆಡಿಯಿಲ್ಲ. ಕುರುಬರ ಆಕ್ರೋಶ ಮತ್ತಷ್ಟು ಜಾಸ್ತಿ ಆಗಿದೇ ... ಎಸ್ಟಿ ಮಿಸಲಾಟಿ ಪಡೆದೆ ತೀರುತ್ತೇವೆ ಅನ್ನೋದು ಕುರುಬರ ಗುರಿ ಆಗಿದೆ ... ಮೈತ್ರಿ ಸರ್ಕಾರದಲ್ಲಾದರು ಬೇಡಿಕೆ ಈಡೇರುತ್ತ ಕಾದು ನೋಡಬೇಕಾಗಿದೆ .. #ಕುರುಬರು_ಪೇಜ್ 

ಕುರುಬ ಸಮಾಜದ ಮಾಹಿತಿಯನ್ನು ಹೊಂದಿರುವ ಪತ್ರಿಕೆ ನಿಮ್ಮ ಮನೆಗೂ ಬರಬೇಕೆ?

*ಜೈ ಗುರುಕನಕ* *ಜೈ ರಾಯಣ್ಣ* ಕುರುಬ ಸಮಾಜದ ಮಾಹಿತಿಯನ್ನು ಹೊಂದಿರುವ ಪತ್ರಿಕೆ ನಿಮ್ಮ ಮನೆಗೂ ಬರಬೇಕೆ? ಸ್ವಾಭಿಮಾನಿ ಕುರುಬರ ಪತ್ರಿಕೆ *ಹಾಲುಮತ‌ ಮಹಾಸಭಾ* ನಿಮಗೂ ಬೇಕಿದ್ದರೆ ಕೂಡಲೇ ನಮ್ಮನ್ನು ಸಂಪರ್ಕಿಸಿರಿ. HALUMATH MAHASABHA (monthly magazine) ph-8123460108 SOMAPPA B MALLUR SAVADATTI BRANCH. SBI A/C- 32102473099.  IFSC SBIN0000254.. Rs.300 per year 1500 for 5 years...  ಪತ್ರಿಕೆ ತಲುಪಿಸಲು ನಿಮ್ಮ ಪೂರ್ಣ ಅಂಚೆ ವಿಳಾಸವನ್ನು ಕಳುಹಿಸಿರಿ  , ಚಂದಾದಾರರಿಕೆ ಹಣ ಅಕೌಂಟ್ ಗೆ ಹಾಕಿ ಸ್ಲಿಪ್‌ ಕಳುಹಿಸಲು ವಿನಂತಿಸುತ್ತೇವೆ... *ಕುರುಬರ ಪತ್ರಿಕೆಗಳಿಗೆ ಪೋಷಕರು ಕುರುಬರೇ....* THANK U  4UR SUPPORT, JAI Rayanna

ಎಸ್.ಟಿ ಮಿಸಲಾತಿಗಾಗಿ ಕುರುಬರು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ

"ಎಸ್.ಟಿ. ಮೀಸಲಾತಿ ಪೂರ್ವಾಭಾವಿ ಸಭೆ " 15-7-2018, ಬೆಳಿಗ್ಗೆ 10 ಕ್ಕೆ ಭಾನುವಾರ ಸ್ಥಳ : ಕನಕಗುರುಪೀಠ, ಬೆಳ್ಳೂಡಿ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ. ------------------------------------------------------------------------- ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನಾಧೀಶ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ ಇವರ ದಿವ್ಯ ಸಾನಿಧ್ಯದಲ್ಲಿ ********************************************************* ಶ್ರೀಕನಕದಾಸರು ಹೇಳಿರುವ "ಹಿಂಡನ್ನಗಲಿದ ಗೋವು ಹುಲಿಗಿಕ್ಕಿದ ಮೇವು "  ಒಗ್ಗಟ್ಟಿನಿಂದ ಬಾಳಿ ಯಾರೂ ಸಹ ನಿಮ್ಮನ್ನು ತುಳಿಯಲಾರರು. ನಿಮ್ಮನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹಾಲುಮತ ಸಮಾಜದ ದಾಸಶ್ರೇಷ್ಟರ ನುಡಿಗಳನ್ನು ಇತರರು ಪಾಲಿಸುತ್ತಾ ಒಗ್ಗಟ್ಟಿನಿಂದ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಉದಾಹರಣೆ ಸಹಿತ ಎಲ್ಲರಿಗೂ ತಿಳಿಯುವಂತೆ ಹೇಳುವುದಾದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಶಾಸಕರ ಸಂಖ್ಯೆ : 58 ಇದೊಂದೇ ಸಾಕು. ರಾಜಕೀಯ ಪಕ್ಷಗಳಿಗೆ ಗೊತ್ತಿದೆ ಅವರು ಸಂಘಟಿತರು, ಶಿಕ್ಷಣ, ಬ್ಯಾಂಕಿಂಗಮೆಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದಾರೆ  ಕೈಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ ಅದುದರಿಂದ...

ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು,

. ಹಾಲುಮತ ಎಂಬುದೇ ಶ್ರೇಷ್ಟ ಅಂತಹ ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಅಧಿವೇಶನದಲ್ಲಿ ಇತರೆ ಸಮಾಜದ ಶಾಸಕರು ಪ್ರಸ್ತಾಪ ಮಾಡುತ್ತಾರೆ " ಕುರುಬರ ಬೋಣಿ"ಯ ಬಗ್ಗೆ ಇದು ಕುರುಬರ ಇತಿಹಾಸ... ಇತರರಿಗೆ ತಿಳಿದಿರುವ ಕುರುಬರ ಇತಿಹಾಸ ಕುರುಬರಾಗಿ ಹುಟ್ಟಿರುವ ಕುರುಬರಿಗೆ ತಿಳಿದಿಲ್ಲ. ಇನ್ನಾದ್ರೂ ನಾವೆಲ್ಲರೂ ಸಮಾಜದ ಸಂಘಟನೆಯ ಕಡೆ ಗಮನ ಹರಿಸೋಣ. ದಿನ ಬೆಳಗಾದ್ರೆ ವೈಯಕ್ತಿಕ  ಚಟುವಟಿಕೆಗಳು ಪ್ರತಿಯೊಬ್ಬರಿಗೂ ಇದ್ದೇ ಇದೆ.‌ ಇತರೆ ಮುಂದುವರೆದ ಸಮಾಜದವರಿಗೂ ಇದ್ದೇ ಇದೆ. ಆ‌ ಸಮುದಾಯಗಳು‌ ಜೀವನದ ಕೆಲ ನಿಮಿಷಗಳನ್ನು ಅವರ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ.  ಇಂದು ಬೆಳಿಗ್ಗೆ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಲು ತಮ್ಮ ತಂಡದ ಸದಸ್ಯರು ಹೋಗಿದ್ವಿ. ಇಂತಹ ತಾರೀಖಿನಂದು ನಮಗೆ ಕಲ್ಯಾಣ ಮಂಟಪ ಬಾಡಿಗೆಗೆ ಬೇಕಿದೆ ಇದು ಹಾಲುಮತ ಸಮಾಜದ ಕಾರ್ಯಕ್ರಮ ಸ್ವಲ್ಪ ರಿಯಾಯಿತಿ ನೀಡಿ ಎಂದು ಕೇಳಿದೆವು. ಅವರು ವೀರಶೈವ ಸಮಾಜದವರು. ಅವರು ಹೇಳಿದ್ದೇನು ಗೊತ್ತೆ ?  ವೀರಶೈವರಿಗೂ ಹಾಲುಮತದವರಿಗೂ ಸಾಮ್ಯತೆ ಇದೆ.  ನಾವು ಇಷ್ಟು ದಿನ ಕೆಲವೊಮ್ಮೆ ಕಡಿಮೆ ದರದಲ್ಲಿಯೇ ನೀಡುತ್ತಿದ್ದೇವು. ಆದರೆ ಸಮುದಾಯ ಬೆಳೆಯಬೇಕಲ್ಲ ಅದಕ್ಕೆ ಕಟ್ಟುನಿಟ್ಟಿನಿಂದ ಒಂದಷ್ಟು ನಿಬಂಧನೆಗಳನ್ನು ಹಾಕಿಕೊಂಡ ಪ್ರತಿಫಲ ಸುಮಾರು ಎರಡು ಕೋಟಿಯಷ್ಟು ಹಣ ಉಳಿದಿದೆ.  ...

"ಶ್ರೀಹಾಲುಮತ ಸೌಹಾರ್ದ ಸಹಕಾರಿ ನಿ." ನಾಳೆ ಪೂಜೆಯೊಂದಿಗೆ ಪ್ರಾರಂಭವಾಗುತ್ತಿದೆ

ಹಾಲುಮತ  ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯಿಂದ ಪ್ರಥಮ ಆರ್ಥಿಕ ಸಂಸ್ಥೆ "ಶ್ರೀಹಾಲುಮತ ಸೌಹಾರ್ದ ಸಹಕಾರಿ ನಿ." ನಾಳೆ ಪೂಜೆಯೊಂದಿಗೆ ಪ್ರಾರಂಭವಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಸಮಾಜ ಮುಖಂಡರು ಮತ್ತು ಇತರೆ ಎಲ್ಲಾ ಸಮಾಜದವರನ್ನು ಆಹ್ವಾನಿಸಿ, ಪೂಜ್ಯಶ್ರೀಗಳಿಂದ ಉದ್ಘಾಟನೆಯಾಗಲಿದೆ (ದಿನಾಂಕ ತಿಳಿಸಲಾಗುವುದು) ಮುಂದುವರೆದ ಯಾವುದೇ ಸಮಾಜವನ್ನು ಗಮನಿಸಿ ನೋಡಿದಾಗ ತಿಳಿಯುವ ಸತ್ಯ. ಆ ಸಮುದಾಯಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು. ಈ ಎರಡೂ ಕ್ಷೇತ್ರಗಳು ಬಲಿಷ್ಠವಾಗಿರುವುದರಿಂದ ರಾಜಕೀಯವಾಗಿ ಹೆಚ್ಚು ಪ್ರಬಲವಾಗಿದ್ದಾರೆ. ಇದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಕುರುಬ ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಜಿಲ್ಲೆಗಳಲ್ಲೂ  ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕುಗಳು ತೆರೆಯಬೇಕು. ಆ ಗುರಿಯೊಂದಿಗೆ ಹಾಲುಮತ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳು  2 ತಿಂಗಳಿನಲ್ಲಿ ಶೇರು ಸಂಗ್ರಹಣೆಯ ಕಾರ್ಯ ಪ್ರಾರಂಭಿಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಆಷಾಢ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ನಾಳೆ 11-7-2018ರಂದು ಬೆಳಿಗ್ಗೆ ಪೂಜೆಯೊಂದಿಗೆ ಸರಳವಾಗಿ ಚಾಲನೆ ನೀಡಲಿದ್ದಾರೆ. ಇದು ಮೊದಲ ಹೆಜ್ಜೆ.. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರಾರಂಭವಾಗಬೇಕು. ನನ್ನ ಸಮಾಜ ಸದೃಢಗೊಳಿಸ...

ಅವರಲ್ಲಿರುವ ಜಾತಿ ಪ್ರೇಮ ಸಿದ್ದರಾಮಯ್ಯನವರಲ್ಲೂ ಮೂಡಲಿ.

ಲಿಂಗಾಯತರಿಗಾಗಿ ಯಡಿಯೂರಪ್ಪ, ಒಕ್ಕಲಿಗರಿಗಾಗಿ ಕುಮಾರಸ್ವಾಮಿ ಜಾತಿ ಪ್ರೇಮ ತೋರಿಸಿ, ಅವರವರ ಜಾತಿಗಳಿಗೆ ಮುಚ್ಚುಮರೆಯಿಲ್ಲದೇ ಅನುಕೂಲ ಮಾಡಿಕೊಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಐದು ವರ್ಷಗಳು ಯಾಕೆ ಕುರುಬರ ಮೇಲೆ ಪ್ರೀತಿ ಮೂಡಲಿಲ್ಲ ಸಾಮಾಜಿಕ ನ್ಯಾಯ ಅಂತ ಹೇಳಿ ಹೇಳಿ ಮೇಲ್ವರ್ಗ, ಕೆಳವರ್ಗದವರಿಗೆಲ್ಲಾ ಕೊಟ್ಟು ಕೊಟ್ಟು ತನ್ನ ಜಾತಿಯನ್ಬೇ ಮರತೇಬಿಟ್ರು. ಒಕ್ಕಲಿಗರು 10 ಸಚಿವರು ಇದ್ದಾರೆ ನಮ್ಮವರನ್ನು ಒಬ್ಬರನ್ನು ಮಾಡಲು ಸತಾಯಿಸಿ ಕೊನೆ ಹಂತದಲ್ಲಿ ಅವಕಾಶ ನೀಡಲಾಯಿತು ಆದರೂ ಕೊನೆಗೆ ಕೈ ಹಿಡಿದಿದ್ದು ಕುರುಬರು. ಇಷ್ಟಾದರೂ ಈ ಸರ್ಕಾರದಲ್ಲೂ ಕುರುಬರಿಗೆ ಸ್ಥಾನ ನೀಡದೇ ಇರುವುದು ಕುರುಬರು ಗೊಂದಲದಲ್ಲಿರುವುದಂತೂ ಸುಳ್ಳಲ್ಲ. ಎಲ್ಲಾ ಕಡೆಯಿಂದಲೂ ಕುರುಬರಿಗೆ ಅನ್ಯಾಯವಾಗುತ್ತಿದ್ದರೂ ಕುರುಬರ ನೆರವಿಗೆ ಯಾರಿದ್ದಾರೆ ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ರಾಜಕೀಯದಲ್ಲಿ ಗೆದ್ದೋನು ಸೋತ, ಸೋತವನು ಗೆದ್ದ. ಅನ್ಯಾಯವಾಗಿದ್ದು, ಆಗುತ್ತಿರುವುದು ಮಾತ್ರ ಕುರುಬರಿಗೆ. ಸಿದ್ದರಾಮಯ್ಯನವರು ಯೋಚಿಸಬೇಕು. ಈಗಲಾದ್ರೂ ಅವರಲ್ಲಿರುವ ಜಾತಿ ಪ್ರೇಮ ಸಿದ್ದರಾಮಯ್ಯನವರಲ್ಲೂ ಮೂಡಲಿ. ಈಗಲಾದ್ರೂ ಅವರಲ್ಲಿರುವ ಜಾತಿ ಪ್ರೇಮ ನಮ್ಮ ಸಿದ್ದರಾಮಯ್ಯನವರಲ್ಲೂ ಮೂಡಲಿ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವುದರಿಂದ ಸಮಾಜದ ಬೇಡಿಕೆಗಳು ಈಡೇರಿಸಲಿ - ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ..

ಕಾಗಿನೆಲೆ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಕುರುಬರ ಬೇಡಿಕೆ ಈಡೇರಿಸಿಕೊಳ್ಳುವ ಸಮಯ ಬರುತ್ತಿದೆ

ನೀನೊಬ್ಬ ಜೊತೆಯಿರಲು ಜಗವೆಲ್ಲ ಎದುರಾಗೆ ಭಯವೇನು ಭಯವೇನು ಗುರುವೇ… ಶ್ರೀಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಮಾಜ ಜಾಗೃತವಾಗುತ್ತಿದೆ. ಸ್ವಲ್ಪ ಸಿಕ್ಕರೆ ಸಾಕು ಕುರುಬ ಸಮಾಜವನ್ನು ಟಾರ್ಗೆಟ್ ಮಾಡುತ್ತಿರುವ ಮಾಧ್ಯಮಗಳು ಮತ್ತು ಇತರರು.. ಇಂತಹ ಸಮಯದಲ್ಲಿ ಕುರುಬ ಸಮಾಜ ಎಚ್ಚೆತ್ತುಕೊಂಡು ಒಗ್ಗಟ್ಟಿನ ಪ್ರದರ್ಶನ ವಾಗುತ್ತಿರುವುದು ಶುಭ ಸೂಚನೆ.  2018 ಬದಲಾವಣೆಯ ಪರ್ವ ಸಮಾಜದಲ್ಲಿ ಆಗಬೇಕು ಅದಕ್ಕಾಗಿ ಕೆಲವೊಂದು ಯೋಜನೆಗಳು ಅನುಷ್ಠಾನಗೊಳ್ಳಲು ನೀಲ ನಕ್ಷೆ ತಯಾರಾಗುತ್ತಿದೆ.  ೧) ಶೀಘ್ರದಲ್ಲೇ ಜಗದ್ಗುರುಗಳ ನೇತೃತ್ವದಲ್ಲಿ ಎಸ್. ಟಿ. ಮೀಸಲಾತಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗುತ್ತಿದೆ. ೨) ರಾಜ್ಯ ಮಟ್ಟದ ಕನಕ ಜಯಂತೋತ್ಸವ ಮತ್ತು ಯುವ ಸಂಕಲ್ಪ ಸಮಾವೇಶದ ರೂಪುರೇಷೆಗಳ ಬಗ್ಗೆ ಚರ್ಚಿಸಿ ದಿನಾಂಕ ಮತ್ತು ಸ್ಥಳವನ್ನು ನಿಗದಿಗಳಿಸಲಾಗುತ್ತಿದೆ ೩) ಕನಕ ಟಿವಿಯ ಪ್ರಾರಂಭದ ಬಗ್ಗೆ  ಚರ್ಚೆಯಾಗಿ ಮೊದಲ ಪ್ರಯತ್ನ ಮಾಡಲು ಸಿದ್ದವಾಗುತ್ತಿದೆ. ೪) ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರಗಳು,  ವಧುವರರ ಮಾಹಿತಿ ಕೇಂದ್ರಗಳು ಪ್ರಾರಂಭಿಸಲು ಚರ್ಚೆ ನಡೆಸಲಾಗುತ್ತಿದೆ. ೫) ಸಮಾಜದಲ್ಲಿನ ಯುವಕರು ಮತ್ತು ಮಹಿಳೆಯರು ಸ್ವಾವಲಂಭಿಗಳಾಗಿ ಸ್ವ ಉದ್ಯೋಗಿಗಳನ್ನಾಗಿಸಲು  ಕೈಗಾರಿಕೆಯನ್ನು ಪ್ರಾರಂಭ ಮಾಡುವ ಕ...

ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಹಾಲುಮತ ಕುರುಬ ಸಮಾಜದ ಹೆಮ್ಮೆ

ಕಾಗಿನೆಲೆ ಕನಕ ಗುರುಪೀಠದ ಪರಮಪೂಜ್ಯ ನಿರಂಜನಾನಂದ ಪುರಿ ಶ್ರೀಗಳ ಬಗ್ಗೆ ಮಾತನಾಡುವ ಮುನ್ನ ಯೋಚಿಸಿ : ಧಾರ್ಮಿಕ ಕ್ರಾಂತಿ : ಹರಿಹರ ತಾಲ್ಲೂಕಿನ ಬೆಳ್ಳೋಡಿಯಲ್ಲಿ ಮಠದ ಭಕ್ತರ ಸಹಕಾರದಿಂದ ಕೇವಲ 210 ದಿನಗಳಲ್ಲಿ ಕಾಯಕಯೋಗಿಯಾಗಿ ಭಕ್ತರ ಭಕ್ತಿಯ ಕುಟೀರ ಲೋಕಾರ್ಪಣೆ. ಹಾಲುಮತ ಸಮಾಜದ ಮಹಾಪುರುಷರ ಬಗ್ಗೆ ಸಮಾಜದಲ್ಲಿ ಜಾಗೃತಿ. ಶತ ಶತಮಾನಗಳಿಂದ ಹೊರಬರದ ಮೆಡ್ಲೇರಿ ಬೀರಲಿಂಗನ ಏಳು ಪಲ್ಲಕ್ಕಿ ಬೆಳ್ಳೋಡಿ ಪ್ರವೇಶ. ಧಾರ್ಮಿಕವಾಗಿ ಹಾಲುಮತ ಧರ್ಮ ಪ್ರಚಾರ ತ್ವರಿತವಾಗಿ ಸಾಗುತ್ತಿದೆ.. ಶೈಕ್ಷಣಿಕ ಕ್ರಾಂತಿ : ಅತ್ಯಾಧುನಿಕ ಎಲ್ಲ ಸೌಕರ್ಯಗಳಿಂದ ಕೂಡಿರುವ ಚಂದ್ರಗುಪ್ತ ಮೌರ್ಯ ಪಬ್ಲಿಕ್ ಶಾಲೆ ವಸತಿ ಸಹಿತ. ಸುಸಜ್ಜಿತ ಸ್ಪರ್ಧಾತ್ಮಕ ಪರೀಕ್ಷ ತರಬೇತಿ ಕೇಂದ್ರದ ಉದ್ಘಾಟನೆ. (ಐಎಎಸ್, ಕೆಎಎಸ್, ಐಪಿಎಸ್...) ರಾಜಕೀಯ ಕ್ರಾಂತಿ : ಲಿಂಗಾಯತ ಒಕ್ಕಲಿಗ ಬ್ರಾಹ್ಮಣ ಮಠಗಳಿಗಷ್ಟೇ ಸೀಮಿತವಾಗಿದ್ದ ರಾಜಕೀಯ ಧುರೀಣರ ಭೇಟಿಯು #ರಾಜಗುರುಯೋಗಿ #ನಿರಂಜನಾನಂದಪುರಿ ಶ್ರೀ ಗಳ ಭೇಟಿಗೆ ಸಮಯಾವಕಾಶ ಕೇಳುವಂತೆ ಮಾಡಿದ್ದು ಅದು ಹಿಂದುಳಿದ ವರ್ಗದ ಮಠಕ್ಕೆ ಸಾಧಾರಣವಾದುದಲ್ಲ... 2012 ರ ದಾವಣಗೆರೆಯ ಹಾಲುಮತ ಶತಮಾನೋತ್ಸವ ಸಮಾರಂಭದಲ್ಲಿ ಸಮಾಜಕ್ಕೆ ಕೊಟ್ಟ ಸಂದೇಶ ಸಮಾಜವನ್ನು ಒಂದು ಮಾಡಿತು.. 2018 ರ ಹರಿಹರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಶ್ರೀಗಳ ಸಂಕಲ್ಪಕ್ಕೆ ಸಾಕ್ಷಿ.. ಹತ್ತಾರು ಪುರ ಪ್ರವೇಶ ಸಮಾಜದ ರಾಜ್ಯಾದ್ಯಂತ ನೂರಾರು ಕನಕ ಭವನಗಳ...