Skip to main content

ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು,

.
ಹಾಲುಮತ ಎಂಬುದೇ ಶ್ರೇಷ್ಟ
ಅಂತಹ ಹಾಲುಮತ ಸಮಾಜದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು,
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧ ಅಧಿವೇಶನದಲ್ಲಿ ಇತರೆ ಸಮಾಜದ ಶಾಸಕರು ಪ್ರಸ್ತಾಪ ಮಾಡುತ್ತಾರೆ " ಕುರುಬರ ಬೋಣಿ"ಯ ಬಗ್ಗೆ
ಇದು ಕುರುಬರ ಇತಿಹಾಸ...
ಇತರರಿಗೆ ತಿಳಿದಿರುವ ಕುರುಬರ ಇತಿಹಾಸ ಕುರುಬರಾಗಿ ಹುಟ್ಟಿರುವ ಕುರುಬರಿಗೆ ತಿಳಿದಿಲ್ಲ.
ಇನ್ನಾದ್ರೂ ನಾವೆಲ್ಲರೂ ಸಮಾಜದ ಸಂಘಟನೆಯ ಕಡೆ ಗಮನ ಹರಿಸೋಣ. ದಿನ ಬೆಳಗಾದ್ರೆ ವೈಯಕ್ತಿಕ  ಚಟುವಟಿಕೆಗಳು ಪ್ರತಿಯೊಬ್ಬರಿಗೂ ಇದ್ದೇ ಇದೆ.‌ ಇತರೆ ಮುಂದುವರೆದ ಸಮಾಜದವರಿಗೂ ಇದ್ದೇ ಇದೆ.
ಆ‌ ಸಮುದಾಯಗಳು‌ ಜೀವನದ ಕೆಲ ನಿಮಿಷಗಳನ್ನು ಅವರ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ.
 ಇಂದು ಬೆಳಿಗ್ಗೆ ಒಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಬುಕ್ ಮಾಡಲು ತಮ್ಮ ತಂಡದ ಸದಸ್ಯರು ಹೋಗಿದ್ವಿ. ಇಂತಹ ತಾರೀಖಿನಂದು ನಮಗೆ ಕಲ್ಯಾಣ ಮಂಟಪ ಬಾಡಿಗೆಗೆ ಬೇಕಿದೆ ಇದು ಹಾಲುಮತ ಸಮಾಜದ ಕಾರ್ಯಕ್ರಮ ಸ್ವಲ್ಪ ರಿಯಾಯಿತಿ ನೀಡಿ ಎಂದು ಕೇಳಿದೆವು. ಅವರು ವೀರಶೈವ ಸಮಾಜದವರು. ಅವರು ಹೇಳಿದ್ದೇನು ಗೊತ್ತೆ ?  ವೀರಶೈವರಿಗೂ ಹಾಲುಮತದವರಿಗೂ ಸಾಮ್ಯತೆ ಇದೆ.  ನಾವು ಇಷ್ಟು ದಿನ ಕೆಲವೊಮ್ಮೆ ಕಡಿಮೆ ದರದಲ್ಲಿಯೇ ನೀಡುತ್ತಿದ್ದೇವು. ಆದರೆ ಸಮುದಾಯ ಬೆಳೆಯಬೇಕಲ್ಲ ಅದಕ್ಕೆ ಕಟ್ಟುನಿಟ್ಟಿನಿಂದ ಒಂದಷ್ಟು ನಿಬಂಧನೆಗಳನ್ನು ಹಾಕಿಕೊಂಡ ಪ್ರತಿಫಲ ಸುಮಾರು ಎರಡು ಕೋಟಿಯಷ್ಟು ಹಣ ಉಳಿದಿದೆ.  ಇದರಿಂದ ನಮ್ಮ‌ಸಮಾಜವು ಆರ್ಥಿಕವಾಗಿ ಬೆಳೆಯುತ್ತಿದೆ ಎಂಬ ಮಾತು
ಯಾವುದೇ ಸಮಾಜ ಬೆಳೆಯಬೇಕಾದರೆ ಸಂಘಟನೆ ಅತ್ಯಗತ್ಯ. ಒಗ್ಗೂಡಿ ಕೆಲಸ ಮಾಡಿದರೆ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿದರೆ.. ಅಸಾಧ್ಯವಾದುದು ಯಾವುದೂ ಇಲ್ಲ.
ಇಂತಹ ವಾಸ್ತವ ಸತ್ಯಗಳು ನಮ್ಮ ಕಣ್ಮುಂದಿವೆ.
ನಾವೆಲ್ಲರೂ ನೋಡಿರುತ್ತೇವೆ. ನೋಡಿಯೂ ನಿಸ್ಸಹಾಯಕತೆಯನ್ನು ಮನಸ್ಸಿನೊಳಗೆ ತೋರಿಸಿಕೊಂಡಿರುತ್ತೇವೆ. ನಮ್ಮಿಂದೇನಾಗುತ್ತೆ ಅನ್ನೋದು ಬಿಡಿ.
ಈಗ ಕುರುಬ ಸಮಾಜಕ್ಕೆ ಉತ್ತಮ ಸಮಯ ಬಂದಿದೆ. ಒಳ್ಳೇಯ ನಿರ್ಧಾರಗಳು ಕೈಗೊಳ್ಳಲಾಗುತ್ತಿದೆ. ಜಗದ್ಗುರುಗಳು ದೂರದೃಷ್ಟಿಯ ಯೋಜನೆಗಳಿಂದ ಎಲ್ಲರೂ ಕೈ ಜೋಡಿಸಿದರೆ ಕೆಲವೇ ವರ್ಷಗಳಲ್ಲಿ "ಕರ್ನಾಟಕದಲ್ಲಿ ನಾವು ಸಹ ( ಕುರುಬರು) ಯಾರಿಗೂ ಕಡಿಮೆ ಇಲ್ಲದಂತೆ ಸದೃಢರಾಗುತ್ತೇವೆ"
ಇದೇ ಭಾನುವಾರ ಮಹತ್ವದ ಸಭೆಯನ್ನು ಆಯೋಜಿಸಲಾಗುತ್ತಿದೆ. 
ಕರ್ನಾಟಕದ ಕುರುಬರು (ನಿರ್ದಿಷ್ಟ ಸಂಖ್ಯೆ)ಯಲ್ಲಿ ಸೇರಿ ಚರ್ಚೆ ನಡೆಸಲಾಗುತ್ತಿದೆ.
ನಮ್ಮ‌ಸಮಾಜದ ಬೇಡಿಕೆಗಳ ಬಗ್ಗೆ, ನಾವು ಮುಂದೆ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ, ಇಟ್ಟ ಹೆಜ್ಜೆ ಹಿಂದಿಡದೇ ಸಾಧನೆಯ ಗುರಿ ತಲುಪುವ ಬಗ್ಗೆ ಕುರುಬರ ಒಗ್ಗಟ್ಟಿನ ಶಕ್ತಿ ಜಗತ್ತಿಗೆ ತೋರಿಸುವ ಸಂಕಲ್ಪದೊಂದಿಗೆ ಸುದೀರ್ಘವಾದ ಸಂವಾದ ನಡೆಯಲಿದೆ. ಪ್ರತಿ ಜಿಲ್ಲೆಯಿಂದ ಇಂತಿಷ್ಟು ಸಮಾಜದ ಬಂಧುಗಳನ್ನು ಆಹ್ವಾನ ಮಾಡಲಾಗುವುದು.‌
ಸಭೆಯ ನಂತರ "ಮಹತ್ವದ ನಿರ್ಧಾರ" ಗಳನ್ನು ಅನುಷ್ಟಾನಗೊಳಿಸುವಲ್ಲಿ ನಾವು ಹಾಲುಮತದ ಕುರುಬರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸೋಣ...  2018 ಕುರುಬರಿಗೆ ಬದಲಾವಣೆಯ ಪರ್ವ ವಾಗಲಿದೆ.
ಬಂಧುಗಳೇ..
ನಿಮ್ಮ‌ ದೈನಂದಿನ ಚಟುವಟಿಕೆಗಳ ಮಧ್ಯೆ ನೀವು ಜನಿಸಿರುವ ಶ್ರೇಷ್ಟ ಹಾಲುಮತ ಸಮಾಜವನ್ನು ಬೆಳೆಸೋಣ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಸಾಧಿಸಿ ತೋರಿಸೋಣ.
ನಮ್ಮ ಸಮಾಜವನ್ನು ಬೆಳೆಸಲು ನಾವು ಕುರುಬರೇ ಮುಂದಾಗಬೇಕೇ ಹೊರತು ಬೇರೆ ಸಮಾಜದವರು ಬರುವುದಿಲ್ಲ. "ಹನಿ ಹನಿಗೂಡಿದರೆ ಹಳ್ಳ ತೆನೆತೆನೆ ಗೂಡಿದರೆ ಬಳ್ಳ" ಪ್ರತಿಯೊಂದು ಮನೆಯಿಂದ ಒಬ್ಬ ಹಾಲುಮತಸ್ಥ ಅವರಿರುವಲ್ಲಿಯೇ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಸಾಕು.
ನಮ್ಮ ಮುಂದೆ ನಮ್ಮದೇ ಸಮಾಜದಲ್ಲಿ ಜನಿಸಿ ಇತಿಹಾಸ ನಿರ್ಮಿಸಿದ ಕನಕದಾಸರು, ಸಂಗೊಳ್ಳಿ ರಾಯಣ್ಣ, ಹಕ್ಕ- ಬುಕ್ಕರು, ಚಂದ್ರಗುಪ್ತ ಮೌರ್ಯ, ಅಹಿಲ್ಯಾಬಾಯಿ ಹೋಳ್ಕರ್ ರಂತಹವರು ನಮಗೆ ರೋಲ್ ಮಾಡಲ್ ಗಳಾಗಿದ್ದಾರೆ. ಇಷ್ಟೊಂದು ಇತಿಹಾಸ ಪುರುಷರು ಜನಿಸಿರುವ ವಿಶ್ವದ ಏಕೈಕ ಸಮಾಜ ಅಂದರೆ ಅದು : ಹಾಲುಮತ - ಕುರುಬ ಸಮಾಜ ಮಾತ್ರ.
ದೇಶದೆಲ್ಲೆಡೆ ಕುರುಬರು ದೈವಾಂಶ ಸಂಭೂತರೆನ್ನಿಸಿಕೊಂಡಿದ್ದಾರೆ. ಇಷ್ಟೆಲ್ಲಾ ನಮ್ಮ ಮುಂದಿರುವ ಸಾಧನೆಗೆ ಅಡ್ಡ ಏನು ಬರುತ್ತೆ ?
ಬನ್ನಿ... ನಮ್ಮ‌ಜೊತೆ ನೀವು ಒಬ್ಬರಾಗಿ... ಮುಂದೆ ಗುರಿ ತೋರಲು  ನಮ್ಮಿಂದೆ ಜಗದ್ಗುರುಗಳಿದ್ದಾರೆ...
ಭಯವೇಕೆ ? ಭಯವೇಕೆ ????
ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ನಮ್ಮಲ್ಲಿರಲು ನಮಗೇಕೆ ಅಂಜಿಕೆ - ಹಾಲುಮತ ಮಹಾಸಭಾ,
ಸಮಾಜದ ಸಮೃದ್ದಿಗೊಂದು ಸಮೂಹ

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...