Skip to main content

ಎಸ್.ಟಿ ಮಿಸಲಾತಿಗಾಗಿ ಕುರುಬರು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ

"ಎಸ್.ಟಿ. ಮೀಸಲಾತಿ ಪೂರ್ವಾಭಾವಿ ಸಭೆ " 15-7-2018, ಬೆಳಿಗ್ಗೆ 10 ಕ್ಕೆ ಭಾನುವಾರ ಸ್ಥಳ : ಕನಕಗುರುಪೀಠ, ಬೆಳ್ಳೂಡಿ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ.
-------------------------------------------------------------------------
ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನಾಧೀಶ
ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು
ಶ್ರೀಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ ಇವರ ದಿವ್ಯ ಸಾನಿಧ್ಯದಲ್ಲಿ
*********************************************************
ಶ್ರೀಕನಕದಾಸರು ಹೇಳಿರುವ
"ಹಿಂಡನ್ನಗಲಿದ ಗೋವು ಹುಲಿಗಿಕ್ಕಿದ ಮೇವು " 
ಒಗ್ಗಟ್ಟಿನಿಂದ ಬಾಳಿ ಯಾರೂ ಸಹ ನಿಮ್ಮನ್ನು ತುಳಿಯಲಾರರು. ನಿಮ್ಮನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ.
ಹಾಲುಮತ ಸಮಾಜದ ದಾಸಶ್ರೇಷ್ಟರ ನುಡಿಗಳನ್ನು ಇತರರು ಪಾಲಿಸುತ್ತಾ ಒಗ್ಗಟ್ಟಿನಿಂದ ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ.
ಉದಾಹರಣೆ ಸಹಿತ ಎಲ್ಲರಿಗೂ ತಿಳಿಯುವಂತೆ ಹೇಳುವುದಾದರೆ,
2018ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಶಾಸಕರ ಸಂಖ್ಯೆ : 58
ಇದೊಂದೇ ಸಾಕು. ರಾಜಕೀಯ ಪಕ್ಷಗಳಿಗೆ ಗೊತ್ತಿದೆ ಅವರು ಸಂಘಟಿತರು, ಶಿಕ್ಷಣ, ಬ್ಯಾಂಕಿಂಗಮೆಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದಾರೆ  ಕೈಗಾರಿಕೆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ ಅದುದರಿಂದ ಅವರಿಗೆ ಮಾನ್ಯತೆ ಸಿಗುತ್ತಿದೆ. ಅವರಿಂದ ನಾವು ಕಲಿಯಬೇಕಾದುದು ಬಹಳ ಇದೆ. ಒಳ್ಳೇಯದ್ದನ್ನು ಯಾರಿಂದ ಬೇಕಾದರೂ ಕಲಿಯಬಹುದು.

** ಕುರುಬ ಸಮಾಜದಲ್ಲೂ ಪ್ರಜ್ಞಾವಂತ ಯುವಕರು ಇದ್ದಾರೆ, ಸಮಾಜದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ. ಪ್ರತಿ ವರ್ಷವೂ ಕನಕದಾಸರ ಜಯಂತಿ, ರಾಯಣ್ಣನವರ ಜಯಂತಿ, ಬಲಿದಾನ ದಿವಸಗಳನ್ನು ಆಚರಿಸುತ್ತಾ ಒಗ್ಗಟ್ಟನ್ನು ತೋರಿಸುತ್ತಿದ್ದಾರೆ.
** ಅದನ್ನು ಮೀರಿ ಸಮಾಜವನ್ನು ಸಂಘಟಿಸುವ ಕೆಲಸ ಬಹಳ ಇದೆ.
ಕುರುಬ ಸಮಾಜದ ಶಕ್ತಿಪೀಠ ಶ್ರೀಕನಕಗುರುಪೀಠ, ಜಗದ್ಗುರುಗಳು, ಪರಮಪೂಜ್ಯರುಗಳು ಇವೆಲ್ಲವೂ ಕುರುಬರಿಗೆ ಶಕ್ತಿ
ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಪೂರಕವಾಗಿ ರಾಜಕೀಯ ಕ್ಷೇತ್ರದಲ್ಲಿ ಯುವಕರನ್ನು ಬೆಳೆಸುವ ಅನಿವಾರ್ಯತೆ ನಮ್ಮ ಕುರುಬ ಸಮಾಜಕ್ಕಿದೆ.
ಈ ಕಾರ್ಯವನ್ನು ಬೇರೆ ಸಮಾಜದವರು ಬಂದು ಮಾಡುವುದಿಲ್ಲ.
ನಾವು - ನೀವು ಈ ಪವಿತ್ರ ಹಾಲುಮತ ಸಮಾಜದಲ್ಲಿ ಹುಟ್ಟಿದ್ದೇವೆ.
ನಮ್ಮ ಹಿರಿಯರು ಇತಿಹಾಸ ನಿರ್ಮಿಸಿ. ಕುರುಬರ ಶಕ್ತಿ, ಯುಕ್ತಿ ಏನೆಂದು ಜಗತ್ತಿಗೆ ತೋರಿಸಿದ್ದಾರೆ. ಇವುಗಳೆಲ್ಲವೂ ನಮಗೆ ಮಾರ್ಗಸೂಚಿಗಳು, ಮಾರ್ಗದರ್ಶನಗಳು ಸಂಗೊಳ್ಳಿ ರಾಯಣ್ಣ, ಕನಕದಾಸರು, ಹಕ್ಕಬುಕ್ಕರು, ಅಹಿಲ್ಯಾ ಬಾಯಿ ಹೋಳ್ಕರ್, ಚಂದ್ರಗುಪ್ತ ಮೌರ್ಯರಂತಹ ಮಹಾತ್ಮರು ಕುರುಬರಿಗೆ ರೋಲ್ ಮಾಡೆಲ್ ಗಳು.
ಅಂದ ಮೇಲೆ ನಾವು - ನೀವು ಈ ಕುರುಬ ಸಮಾಜದಲ್ಲಿ ಹುಟ್ಟಿದ್ದೇವೆ. ಈ ಸಮಾಜಕ್ಕಾಗಿ ನಾವು ಏನಾದರೂ ಕೊಡಲೇಬೇಕಲ್ಲವೇ ??
ನಮ್ಮಲ್ಲಿ ಒಗ್ಗಟ್ಟಿಲ್ಲ.. ನಾವು ಒಗ್ಗಟ್ಟಾಗುವುದಿಲ್ಲ ಎಂಬ ಕೊರಗನ್ನು ದೂರಕ್ಕೆ ತಳ್ಳಿ..
ಕುರುಬ ಸಮಾಜದ ಒಗ್ಗಟ್ಟಿಗಾಗಿ ಸ್ವಯಂಪ್ರೇರಿತರಾಗಿ ನೀವುಗಳೇ ಮುಂದೆ ಬನ್ನಿ..
** ನಮ್ಮ ಸಮಾಜದಲ್ಲಿ ಒಂದು ಕೆಟ್ಟ ವ್ಯಾದಿ ಇದೆ. ಅವರು ಸರಿ ಇಲ್ಲ,  ಇವರು ಸರಿ ಇಲ್ಲ ಅವರನ್ನು ಅಧ್ಯಕ್ಷರನ್ನು ಮಾಡಿದ್ರಿ ಇವರನ್ನು ಬಿಟ್ರಿ, ಇವುಗಳು ಹೆಚ್ಚಾಗಿ ಕೇಳಿ ಬರುತ್ತಿರುತ್ತಿವೆ.
ಅವನು ಸರಿ ಇಲ್ಲ ಅವನು ಯಾವ ಕೆಲಸ ಮಾಡುವುದಿಲ್ಲ. ಅವರನ್ನು ತೆಗೆಯಿರಿ. ಅವನು ಬಂದ್ರೆ ನಾನು ಬರೋದಿಲ್ಲ ಅನ್ನೋ ಮಾತುಗಳನ್ನು ಸಹ ಕೇಳುತ್ತಿರುತ್ತೇವೆ..
ಅವನು.. ಅವನು ಅಂತಾರಲ್ಲ  ಆ ಅವನು ಯಾರು ???? ನಮ್ಮ ಕುರುಬ ಸಮಾಜದ ಬಂಧುವೇ ಅಲ್ಲವೇ ? ಆ ಅವನನ್ನು ದೂರವಿಟ್ಟು ಸಮಾಜದ ಸಂಘಟನೆಯನ್ನು ಹೇಗೆ ಮಾಡುವುದು ? ತಪ್ಪು ಮಾಡದೇ ಇರುವವರು ಯಾರೂ ಇಲ್ಲ.. ತಪ್ಪುಗಳನ್ನು ಸರಿ ಮಾಡಿಕೊಂಡು, ಪ್ರೀತಿ, ವಿಶ್ವಾಸದಿಂದ ಜೊತೆಗಿರುವವರುನ್ನು, ದೂರ ದೂರ ಇರುವವರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೇ ಸಂಘಟಕನ / ಸಂಘಟನೆಯ ಕರ್ತವ್ಯ.
***************************************************************
ಇದೇ ಭಾನುವಾರ 15 ರಂದು ಬೆಳಿಗ್ಗೆ 10 ಕ್ಕೆ ನಮ್ಮ ಕನಕಗುರುಪೀಠ, ಶಾಖಾಮಠ, ಬೆಳ್ಳೂಡಿ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ. ಇಲ್ಲಿ  ಜಗದ್ಗುರುಗಳ ಸಾನಿಧ್ಯದಲ್ಲಿ
ಸಮಾಜದ ಸಂಘಟನೆಯ ಬಗ್ಗೆ, ದಶಕಗಳ ಬೇಡಿಕೆಯಾದ "ಎಸ್.ಟಿ. ಮೀಸಲಾತಿ ಹೋರಾಟದ ಬಗ್ಗೆ" ಚರ್ಚೆ - ಸಂವಾದ- ನಿರ್ಧಾರ ಸಭೆಯನ್ನು ಆಯೋಜಿಸಲಾಗುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ದೂರವಾಣಿ ಮೂಲಕವೂ ಮತ್ತು ಪೋಸ್ಟಗಳ ಮೂಲಕವೂ ಆಹ್ವಾನ ಮಾಡುತ್ತಿದ್ದೇವೆ.
___________________________________________________
ಇದು ರಾಜಕೀಯ ಕಾರ್ಯಕ್ರಮವಲ್ಲ. ಸಮಾಜದ ಕಾರ್ಯಕ್ರಮ, ರಾಜಕೀಯವನ್ನು ಹೊರಗಿಟ್ಟು ನಾವು ಕುರುಬರು - ನನ್ನ ಸಮಾಜದ ಸಂಘಟನೆಗಾಗಿ ನನ್ನ ಶಕ್ತಿ ಕೇಂದ್ರ ಕನಕಗುರುಪೀಠದೊಳಗೆ ಬಂದಿದ್ದೇನೆ. ಎಂಬ ಸಂಕಲ್ಪದೊಂದಿಗೆ ಭಾಗವಹಿಸಬೇಕಾಗುತ್ತದೆ. ಈ ಸಭೆ ಹಲವು ಉತ್ತಮ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದ್ದು.
(ಎಲ್ಲರ ಮೊಬೈಲ್ ಗಳಿಗೆ ಎರಡು ತಾಸು ರೆಸ್ಟ್ ಕೊಟ್ಟುಬಿಡೋಣ)
ನನ್ನ ಸಮಾಜವನ್ನು ಸದೃಢಗೊಳಿಸುತ್ತೇವೆ ಎಂಬ ಮನಸ್ಸಿರುವವರು ಈ ಸಭೆಯಲ್ಲಿ ಭಾಗವಹಿಸಿ..

** ಮುಖ್ಯವಾಗಿ ಭಾಗವಹಿಸುವವರೆಲ್ಲರೂ ಸ್ವಯಂ ಸೇವಕರು ಎಲ್ಲರಿಗೂ ಜವಾಬ್ದಾರಿಯಿರುತ್ತದೆ. ಶಾಂತಿ, ಸೌಹಾರ್ದತೆಯಿಂದ ಈ ಸಭೆಯಿಂದ ಉತ್ತಮ ಸಂದೇಶವನ್ನು ಹೊತ್ತು ಹೊರಡೋಣ.
************************************************************
ಅಸಾಧ್ಯ ಯಾವುದೂ ಅಲ್ಲ.. ಮನಸ್ಸಿದ್ರೆ ಮಾರ್ಗ
ಗೆಲುವಿನತ್ತ ಪಯಣ..
ಗುರಿ ಮುಟ್ಟುವ ಸಂಕಲ್ಪ..
ಗುರಿ ಮುಟ್ಟುವ ನಂಬಿಕೆ ನಿಮ್ಮದಾಗಿರಲಿ.

(ದಾವಣಗೆರೆ ಜಿಲ್ಲೆ, ಹರಿಹರ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಿಂದ
ಶಿವಮೊಗ್ಗ ಮಾರ್ಗವಾಗಿ ಬೆಳ್ಳೂಡಿ ಕನಕಗುರುಪೀಠ 6 ಕಿಮೀ. ದೂರದಲ್ಲಿದೆ. ಹೈವೇ ರಸ್ತೆ ಪಕ್ಕದಲ್ಲಿ ಬೃಹತ್ತಾಕಾರದ ಶಾಖಾಮಠ, ಚಂದ್ರಗುಪ್ತ ಮೌರ್ಯ ಶಾಲೆಯ ಕಟ್ಟಡಗಳನ್ನು ಹೊಂದಿದೆ)

-- ಹಾಲುಮತ ಮಹಾಸಭಾ -
ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ..
ಮತ್ತು
ಕುರುಬ ಸಮಾಜದ ಸಂಘಟನೆಗಳು

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...