Skip to main content

ವಿಜಯನಗರ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.

*ಕುರುಬ ಕುಲದೊಳಗೊಬ್ಬ ಧರಣಿ ಪಾಲಕ_ಹುಟ್ಟಿ*
*ಉರವಣಿಸಿ_ಧರಣಿಯೋಳು ಕದನ ಪೆಚ್ಚಲು*
*ಹಂಪಿಯಲಿ ಕರಿಯ ಕಟ್ಟಿದರು ಸವ೯ಜ್ಞ*
🚩🕉🚩🕉🚩🕉🚩
ಈ ದಿನ ಇತಿಹಾಸದ ಪುಟದೊಳಗೆ ಹೊಸ ಅದ್ಭುತ ಸೃಷ್ಟಿಯಾದ ದಿನ. ಸಮಸ್ತ ಭಾರತವನ್ನು ಒಗ್ಗೂಡಿಸಿ ಬೃಹತ್ ಸಾಮ್ರಾಜ್ಯ ಕಟ್ಟಲು ಆದಿಯಾದ ದಿನ. ಭವಿಷ್ಯದ ವಿಜಯನಗರ ಸಾಮ್ರಾಜ್ಯಕ್ಕೆ  ಬುನಾದಿ ಹಾಕಿದ ಹಕ್ಕಬುಕ್ಕ ಕುರುಬಗೌಡರು ಜನಿಸಿದ ದಿನ.
🕉🚩🕉🚩🕉🚩🕉
ಹಕ್ಕ,ಬುಕ್ಕ,ಮುದ್ದಣ್ಣ,ಮಾರಪ್ಪ,ಕಂಪಣ್ಣ ಎಂಬ ಐವರು ಕುರಿಗಾಹಿ ಸಹೋದರರು. ಅವರಲ್ಲಿ ಹಕ್ಕಬುಕ್ಕರು ಪ್ರಭಲ ಪರಾಕ್ರಮಿಗಳು ಶಿವಭಕ್ತರು. ಅವರಿಂದ ಪ್ರಾರಂಭವಾದ ಸಾಮ್ರಾಜ್ಯವೇ ವಿಜಯನಗರ ಸಾಮ್ರಾಜ್ಯ!. ವಿಜಯನಗರ ಕಟ್ಟಿದ ವೀರ ಕುರುಬರಾದ ಹಕ್ಕಬುಕ್ಕರನ್ನು ಇತ್ತೀಚೆಗೆ ಕೆಲವು ಬು(ಲ)ದ್ಧಿ ಜೀವಿಗಳು ಬೇಡರನ್ನಾಗಿ,ಬ್ರಾಹ್ಮಣರನ್ನಾಗಿ ಮಾಡಲು ತಮಗೆ ತಿಳಿದಂತೆ ಅಧ್ಯಯನ ಮಾಡಿದ್ದು ವಿಪಯಾ೯ಸವೇ ಸರಿ. ಆದರೆ ಅಂದಿನ ಶಾಸನಗಳನ್ನು,ದೇವಸ್ಥಾನಗಳನ್ನು,ಜನಪದರನ್ನು ಇವರು ಹೈಜಾಕ್ ಮಾಡಲು ಸಾಧ್ಯವೇ ಇಲ್ಲ. ಅದೇನೆ ಇರಲಿ ಆದರೆ ಇಡೀ ಭಾರತ ದೇಶ ಅರಬ್ ದಿಂದ ಬಂದವರಿಂದ ನಾಶವಾಗುತ್ತಿತ್ತು ಅಂತಹ ಸಂದಭ೯ದಲ್ಲಿ ದೇಶ,ಧಮ೯ದ ರಕ್ಷಣೆ ಮಾಡಲು ಕಂಕಣ ಕಟ್ಟಿ ನಿಂತವರು ಹಕ್ಕ ಬುಕ್ಕರು.
🚩🕉🚩🕉🚩🕉🚩
ಹಕ್ಕಬುಕ್ಕರು ಕುರುಬರು ಎಂದರೆ ಕೆಲವರಿಗೆ ಸಹಿಸಲಸಾಧ್ಯ ಉರಿ! ಆದರೆ ಅಂತವರು ಗಮನಿಸಬೇಕಾದದ್ದು ಏನೆಂದರೆ.

*ಕುರುಬರು ಎಂದರೆ ಕೇವಲ ಕುರಿ ಕಾಯುವ ವೃತ್ತಿ ಮಾಡುವವರಲ್ಲ.

*ಕುರುಬರನ್ನು ಆಂಧ್ರ,ತಮಿಳುನಾಡು,ಕನಾ೯ಟಕ,ಕಾಶ್ಮೀರ,ಅಂಡಮಾನ್ ನಿಕೋಬಾರ್,ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ವಿವಿಧ ಹೆಸರುಗಳಿಂದ ಕಾಣಬಹುದು.

*ಕುರುಬರನ್ನು ಕುರುಂಭ,ಕುರಭಗೌಡ,ಗೌಡ,ಧನಗರ್,ಕೊಲಕಾರ್,ಷೀಪಡ್೯ ಮುಂತಾದ ಹೆಸರುಗಳಿಂದ ಗುರುತಿಸಲಾಗಿದೆ.

*ಮಹಾರಾಷ್ಟದಲ್ಲಿ ಕುರುಬರನ್ನು ಧನಗರ್ ಎಂದು ಕರೆಯುತ್ತಾರೆ.
ಛತ್ರಪತಿ ಶಿವಾಜಿ ಧನಗರ್ ಎಂಬ ಕುರುಬನಾಗಿದ್ದಾನೆ. ಮತ್ತು ಧನಗರ್ ಕುರುಬರು ಭವಾನಿ(ಪಾವ೯ತಿ ರೂಪ) ಮತ್ತು ಮೈಲಾರಲಿಂಗನನ್ನು ಖಂಡೋಬಾ ಎಂದು ಪೂಜಿಸುತ್ತಾರೆ.

*ವೇಧಗಳ ಕಾಲದಲ್ಲಿ ಕುರುಬರನ್ನು ಚಂದ್ರ ವಂಶೀಯರು,ಕ್ಷೀರಪಥದವರು ಮುಂತಾದ ಹೆಸರುಗಳಿಂದ ಕರೆಯಲಾಗಿದೆ.ಶೌಯ೯,ಪರಾಕ್ರಮಗಳಿಂದ ಇವರು ಹೆಸರು ವಾಸಿ. ಕ್ಷತ್ರಿಯರು ಕೂಡ ಆಗಿದ್ದಾರೆ.

*ಸವ೯ರಿಗೂ ಹಕ್ಕಬುಕ್ಕ ವೀರ ಸಹೋದರರ ಜಂಯಂತ್ಯೋತ್ಸವದ ಶುಭಾಶಯಗಳು*

ಪ್ರಕಟಣೆ:-
*ಹಾಲುಮತ ಯುವ ವೇಧಿಕೆ(ರಿ)ಹಾವೇರಿ*

ಹಕ್ಕಬುಕ್ಕರ ಬಗ್ಗೆ ಚಿತ್ರದುಗ೯ದ ಹೊಳಲ್ಕೆರೆಯಲ್ಲಿನ ಶಾಸನ ನೋಡಬಹುದು.
ಎಪಿಗ್ರಾಪಿಯಾ ಆಫ್ ಕನಾ೯ಟಕ ನೋಡಿ.

Comments

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...