ರಾಜಕೀಯ ಭಿನ್ನಾಭಿಪ್ರಾಯಗಳಿಂದ ಕುರುಬ ಸಮಾಜದ ಹಿರಿಯರಾದ ವಿಶ್ವನಾಥ್‍ರವರು ಮತ್ತು ಸಿದ್ದರಾಮಯ್ಯನವರ ಮುಸುಕಿನ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮಾಜ. ------------------------------------------------------------------ ಭಾರತ ದೇಶದಲ್ಲಿ 14 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಕುರುಬ ಸಮಾಜ ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿರುವ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಿಲ್ಲದೇ ಇರುವುದು ದುರಂತ. ಇಂತಹ ಸ್ಥಿತಿಯಲ್ಲಿ ಕುರುಬರು ಜೀವಿಸುತ್ತಿರುವಾಗ, ಸಿದ್ದರಾಮಯ್ಯನವರು ರಾಜ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆ ತರುವಂತದ್ದು. ಹೆಚ್. ವಿಶ್ವನಾಥ ರವರ ಕೊಡುಗೆಯೂ ಸಮಾಜಕ್ಕೆ ಅಪಾರವಾದುದು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪನೆ ಮಾಡುವಲ್ಲಿ ಸಂಸ್ಥಾಪನಾ ಅಧ್ಯಕ್ಷರಾಗಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿದ್ದರು. ಸಮಾಜದಲ್ಲಿ ಇರುವ ಬೆರಳಣಿಕೆಯಷ್ಟು ರಾಜಕೀಯ ಮುಖಂಡರÀ ಏಳಿಗೆಯನ್ನು ಕುರುಬ ಸಮಾಜವು ಬಯಸುತ್ತಿದೆ. ಆದರೆ ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ಭಿನ್ನಾಭಿಪ್ರಾಯಗಳು...