"ಮನೆಗೆ ಮಾರಿ.. ಊರಿಗೆ ಉಪಕಾರಿ" ಸಿದ್ದರಾಮಯ್ಯ ನವರನ್ನು ಕೈ ಹಿಡಿದಿದ್ದು ಮನೆಯವರು (ಕುರುಬರು) ಊರಿ ನವರು ಕೇಳದೇ ಇದ್ರೂ ಘೋಷಣೆ ಮಾಡಿ ಭಾಗ್ಯಗಳನ್ನು ನೀಡಿದ ಸಿದ್ದರಾಮಯ್ಯ ನವರಿಗೆ ಮುಸ್ಸಂಜೆಯಲ್ಲಿ...ಊರಿನವರು ಕೊಟ್ಟಿದ್ದು "ಕೈ". ಐದು ವರ್ಷಗಳ ಕಾಲ ನಮ್ಮ ಮನೆಯ ಹಿರಿಯ, ಸಹೋದರ, ಮಗ ರಾಜ್ಯವನ್ನಾಳುತ್ತಿದ್ದಾರೆ ಎಂಬ ಹೆಮ್ಮೆ ಕುರುಬರದ್ದಾಗಿತ್ತು. ಮನೆಯವರು ಏನೂ ಕೇಳಿದರೂ ಆಸಮಯಕ್ಕೆ ಊರಿನವರ ಉಸಾಬರಿಯ ಬಗ್ಗೆಯೇ ಮಾತನಾಡಿ ಸಮಾಧಾನ ಮಾಡಿ ಕಳುಹಿಸುತ್ತಿದ್ದ " ಊರಿಗೆ ಉಪಕಾರಿ". ಆದರೂ ಚುನಾವಣೆಯ ಸಮಯದಲ್ಲಿ ಊರಿಗೆ ಉಪಕಾರಿಯಾಗಿದ್ದ ಸಿದ್ದರಾಮಯ್ಯ ನವರನ್ನು ಮರೆತ ಊರಿನವರು ತಂತ್ರ ಕುತಂತ್ರದಿಂದ ಸೋಲಿಸಿದರು. ನಮ್ಮ ಮನೆಯವರನ್ನು ಕುತಂತ್ರದಿಂದ ಸೋಲಿಸುತ್ತಿದ್ದಾರೆ ಎಂಬುದನ್ನು ಅರಿತ ಮನೆಯ ಗುರು - ಹಿರಿಯರು - ಯುವಕರಾದಿಯಾಗಿ ಊರಿನ ಉಪಕಾರಿಯ ಬೆಂಬಲಕ್ಕೆ ನಿಂತರು. ಇನ್ನೇನು ರಾಜಕೀಯ ಕ್ಷೇತ್ರದಲ್ಲಿ ಸೋಲಿನೊಂದಿಗೆ ವಿದಾಯ ಹೇಳುವ ಪರಿಸ್ಥಿತಿ ಬರುತ್ತಿದೆ ಎನ್ನುವಾಗ ಸಿದ್ದರಾಮಯ್ಯ ನವರ " ಕೈ" ಹಿಡಿದಿದ್ದು " ಮನೆಯವರು (ಕುರುಬರು)" ಈ ನಾಣ್ಣುಡಿಯನ್ನು ಅಂದು ಸಿದ್ದರಾಮಯ್ಯ ನವರ ತಂದೆಯವರು ಹೇಳುತ್ತಿದ್ದರೆಂದು ಹೇಳಕೊಂಡಿದ್ದಾರೆ. ಅವರ ತಂದೆಯವರ ಮಾತನ್ನು ಆಲಿಸಿ ಅರ್ಥ ಮಾಡಿಕೊಂಡು.. ಮನೆಗೂ (ಕುರುಬರು) ಒಳಿತನ್ನು ಮಾಡಿದ್ದಿದ್ದರೆ. ಮನೆಯವರು ಸಂತೋಷ ಪಡುತ್ತಿದ್ದರು. ಸಾರ್ಥಕವೂ ಆಗುತ್ತಿತ್ತು. ಊರಿನವರು ಸರಿಯಾದ ಸಮಯದಲ್ಲಿ ಕೈ ಕೊಟ್ಟಿದ್ದರೂ,ಅದರ ಬಗ್ಗೆ ಅರಿವಿದ್ದರೂ ಸಹ ಈಗಲೂ ಮನೆಯವರ ಬಗ್ಗೆ ಕಾಳಜಿ ತೋರಿಸದೇ ಇದ್ರೆ ಹೇಗೆ ? ಈಗ ಅಧಿಕಾರದ ಗದ್ದುಗೆಯ ಮೇಲೆ ಕುಳಿತಿರುವವರ ಮನೆಯವರನ್ನು ನೋಡಲಿ. 10 ಜನರನ್ನು ತನ್ನ ಮನೆಯವರನ್ನೇ ತಮ್ಮ ಸುತ್ತಲೂ ಇಟ್ಟುಕೊಂಡು ಪೋಷಿಸುತ್ತಿದ್ದಾರೆ. ಹಿಂದೆಯೂ ಸಹ ಆಡಳಿತ ನಡೆಸಿದ ಮನೆಯವರು ಸಹ. 14 ಜನ ತನ್ನ ಮನೆಯವರು ಸಂಬಂಧಿಕರನ್ನು ಸುತ್ತಮುತ್ತಲು, ತನ್ನೊಟ್ಟಿಗೆ ಇಟ್ಟುಕೊಂಡು.. ತನ್ನ ಮನೆ ( ಅವರ ಜಾತಿ) ತನ್ನ ಗುಡಿ ಗುಡಾರಗಳನ್ನು (ಮಠ) ಬೆಳೆಸಿದ್ದರು. ಸಿದ್ದರಾಮಯ್ಯ ನವರ ತಂದೆ ಅಂದು ಹೇಳಿದ್ದರು ಅದನ್ನು ಅಂದು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿಲ್ಲ.. "ಸೋರುತಿಹದು ಮನೆಯ ಮಾಳಿಗಿ.." ಎಂಬುದನ್ನು ಮನವರಿಕೆ ಮಾಡಿಕೊಡಲು ಮುಂದಾಗಿರುವ ಮನೆಯವರು, ಮನೆಯ ಗುಂಪುಗಳು ( ಸಂಘ ಸಂಸ್ಥೆಗಳು) ಗುರುಗಳೇ ನೇರವಾಗಿ ಹೇಳಿದರೂ ಈಗಲೂ ಅರಿತುಕೊಳ್ಳದೇ.. ಮತ್ತದೇ ಊರಿಗೆ ಉಪಕಾರಿಯಾಗುತ್ತೇನೆ ಎಂದು ಹೊರಟವರ ಮುಂದೆ ಮನೆಯವರು ಏನು ಹೇಳಿದರೂ ಪ್ರಯೋಜನ ಇಲ್ಲ ಅನ್ನಿಸುತ್ತೆ. ಮನೆಯವರ ದೌರ್ಭಾಗ್ಯ ಎಂದುಕೊಂಡು.. ಪಾಲಿಗೆ ಬಂದಿದ್ದನ್ನು ಅನುಭವಿಸುತ್ತಾ ಮುಂದೆ ಸಾಗುವುದೊಂದೇ ದಾರಿ...ಹಾಲುಮತ ಮಹಾಸಭಾ ಮನೆಯ (ಕುರುಬರ) ಪರವಾಗಿ ಮನೆಯೊಡಯನ ಮುಂದೆ ವಿನಂತಿ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ನವರೇ... ರಾಜಕೀಯ ಕ್ಷೇತ್ರದಲ್ಲಿ ಅಂದು ನಿಮ್ಮನ್ನು ಕೈ ಹಿಡಿದಿದ್ದು ನಿಮ್ಮದೇ ಕುರುಬ ಸಮಾಜ. ಅಂದು ದೊಡ್ಡ ಸಮಾಜ ನಿಮ್ಮಹಿಂದಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಯನ್ನಾಗಿಸಿದ್ದು. ಆ ಪಕ್ಷದ ನಂಬಿಕೆಯನ್ನು ನಿಮ್ಮಮನೆಯ ವರು (ಕುರುಬರು) ಹುಸಿಗೊಳಿಸಲಿಲ್ಲ. ಪಕ್ಷ ಬೇಧ ಮರೆತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅಂದು ಬೆಂಬಲಿಸಿದ್ದರು. ನಿನ್ನೆಯೂ ಸಹ ಬೆಂಬಲಕ್ಕೆ ನಿಂತರು. ಊರಿಗೆ ಉಪಕಾರಿಯಾಗಿದ್ದ ಸಿದ್ದರಾಮಯ್ಯ ನವರನ್ನು ಚಾಮುಂಡೇಶ್ವರಿ ಯಲ್ಲಿ ಸೋಲಿಸಿದರು. ಆದರೆ ಮನೆಯವರು ಬದಾಮಿಯಲ್ಲಿ ಒಗ್ಗಟ್ಟಿನಿಂದ ಗೆಲ್ಲಿಸಿದರು. ಈಗಲಾದ್ರೂ ಮನೆಯ ಕಡೆ ಗಮನ ಕೊಡಿ. ಮನೆಗೂ ಉಪಕಾರಿಯಾಗಿ ಎಂದು ಕರ್ನಾಟಕದಲ್ಲಿರುವ ನಿಮ್ಮ (ಕುರುಬರು) ಮನೆಯವರು ಕೇಳಿಕೊಳ್ಳುತ್ತಿದ್ದಾರೆ.
#ರಾಜು ಮೌರ್ಯ ದಾವಣಗೆರೆ
#ರಾಜು ಮೌರ್ಯ ದಾವಣಗೆರೆ
Comments
Post a Comment