ಮನೆಯಲ್ಲಿ ಮಗ ಹಠ ಮಾಡ್ತಾನೆ.. ನನಗದು ಬೇಕೇ ಬೇಕು ಅಂತ..
ತಂದೆ ತಾಯಿಗಳು ಮಗನ ಆಸೆಯನ್ನು ಪೂರೈಸಲಾರದೇ ದೊಡ್ಡದ್ದನ್ನು ಕೊಡಿಸಲು ಸಾಧ್ಯವಾಗದೇ ಹೋದ್ರು ಸಣ್ಣದ್ದನ್ನು ಕೊಡಿಸಿ.. ಸಮಾಧಾನ ಮಾಡುತ್ತಾರೆ...
----------------------------------------------------------------
**ನಮ್ಮ ಕುರುಬ ಸಮಾಜದಲ್ಲೂ ಇಂತದ್ದೇ ಪರಿಸ್ಥಿತಿ.
ಈ ಚಿತ್ರದಲ್ಲಿರುವ ವೀರಣ್ಣ ಮೋದಿ ಬೆಳಗಾವಿ ಜಿಲ್ಲೆ, ಗೋಕಾಕ ತಾಲ್ಲೂಕು, ಯಾದವಾಡದವರು. ಸಮಾಜದ ಕೆಲಸ ಅಂದ್ರೆ, ರಾಯಣ್ಣ ಅಂದ್ರೆ ಎಲ್ಲಿಲ್ಲದ ಅಭಿಮಾನ.
ವೀರಣ್ಣನಿಗೂ ಮುಂದುವರೆದ ಸಮಾಜದವರಂತೆ ನಮ್ಮ ಕುರುಬ ಸಮಾಜವೂ ಬೆಳೆಯಬೇಕು ನಾವು ಅವರಂತಾಗಬೇಕು ಅನ್ನೋ ನೋವು.
ಹಾಲುಮತ ಮಹಾಸಭಾದಲ್ಲಿ ಸಕ್ರೀಯರಾಗಿ, ಸಮಾಜದ ಕೆಲಸಗಳಲ್ಲಿ ಭಾಗಿಯಾಗುತ್ತಾರೆ.
ನಮ್ಮ ಕುರುಬ ಸಮಾಜಕ್ಕೊಂದು "ಟಿವಿ ಚಾನೆಲ್ " ಬೇಕು ಅನ್ನೋ ಆಸೆ ಕುರುಬರಿಗೆಲ್ಲರಿಗೂ ಇದೆ. ಆದರೆ ಕುರುಬರ ದುರಾದೃಷ್ಟ.. ಕುರುಬರನ್ನು ಯಾರೂ ಕೇರ್ ಮಾಡುತ್ತಿಲ್ಲ.
ವೀರಣ್ಣ ಮೋದಿ ಮೇಕ್ ನ್ಯೂಸ್ ಅನ್ನೋ ಆಪ್ ಡೌನ್ ಲೋಡ್ ಮಾಡಿಕೊಂಡರು.. ತನಗೆ ಸಿಕ್ಕ ಸಣ್ಣ ಪುಟ್ಟ ವಿಡಿಯೋಗಳನ್ನು ಎಡಿಟ್ ಮಾಡಿ ಅದರ ಮೇಲ್ಭಾಗದಲ್ಲಿ "ಶ್ರೀಕನಕ ಟಿವಿ" ಅನ್ನೋ ಲೋಗೋ ಅಂಡಿಸಿದರು. ಬ್ರೇಕಿಂಗ್ ನ್ಯೂಸ್ ಸ್ಥಳದಲ್ಲಿ ಹಾಲುಮತ ಮಹಾಸಭಾ ಬರುವಂತೆ ಟೈಪಿಸಿದರು, Scrollನಲ್ಲಿ ಅದಕ್ಕೆ ಸಂಬಂಧ ಪಟ್ಟ ವಿವರಗಳನ್ನು ಬರೆದರು
ಪೇಸ್ ಬುಕ್ ವಾಟ್ಸಪ್ ಗಳನ್ನು ಸೇರ್ ಮಾಡುತ್ತಾ ಬರುತ್ತಿದ್ದಾರೆ.
ಅದೆಷ್ಟು ಅಭಿಮಾನ.. ದೊಡ್ಡದ್ದನ್ನು ಮಾಡಲು ಸಾಧ್ಯವಿಲ್ಲ ಎಂದಾಗ ಸಣ್ಣದ್ದನ್ನು ಮಾಡಿ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಇವರಂತೆ ಬೈಲಹೊಂಗಲದ ಈಶ್ವರ ಶಿಳ್ಳೇದಾರ ಮತ್ತು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಶಿವು ಮಗದ್ದೂಮ್ಮ ಎಂಬ ಯುವಕ. ತನಗೆ ಸಿಕ್ಕ ಚಾನೆಲ್ ಗಳನ್ನು ಬಳಸಿಕೊಂಡು.. ನ್ಯೂಸ್ ಗಳನ್ನು, ವರದಿಗಳನ್ನು ಮಾಡುತ್ತಿದ್ದಾರೆ.
ಮೈಸೂರಿನ ವಿವನ್ ಈಶ್ವರ್ ಇವರ ಬಗ್ಗೆ ಅದೆಷ್ಟು ಹೇಳಿದರೂ ಸಾಲದು. ಸಮಾಜಕ್ಕೆ ಸಂಬಂಧ ಪಟ್ಟ ಮಾಹಿತಿಗಳನ್ನು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೇರ್ ಮಾಡುತ್ತಲೇ ಇರುತ್ತಾರೆ. ಕುರುಬ ಪೇಜ್, ಕುರುಬ ನ್ಯೂಸ್ ಎಂಬ ಪೇಜ್ ಗಳನ್ನು ನಿರ್ವಹಿಸುತ್ತಿರುವ ಹುಣಸೂರಿನ ಉಮೇಶ್, ಮಧು ರಂತಹ ಅದೆಷ್ಟೋ ಯುವಕರು
ಕುರುಬ ಸಮಾಜದ ಅಭಿವೃದ್ಧಿಗಾಗಿ, ಉನ್ನತಿಗಾಗಿ ತಮಗೇ ತಿಳಿಯದಂತೆ ಪ್ರತಿನಿತ್ಯವೂ ತೊಡಗಿಸಿಕೊಳ್ಳುತ್ತಿದ್ದಾರೆ.
**************************
ಒಂದಿನ ಕುರುಬರದ್ದು ಒಂದು ಟಿವಿ ಚಾನೆಲ್ ಪ್ರಾರಂಭ ವಾಗಬಹುದು ಎಂಬ ನಂಬಿಕೆ ಆ ಯುವಕರಲ್ಲಿದೆ.
ಒಂದಿನ ಕುರುಬರೂ ಸಹ ಎಲ್ಲಾ ಸಮಾಜದವರ ಸರಿ ಸಮಾನರಾಗಿ, ಅವರನ್ನೂ ಮೀರಿಸುವಂತೆ ಬೆಳೆಯುತ್ತೇವೆ ಅನ್ನೋ ನಂಬಿಕೆ ಹಾಲುಮತ ಮಹಾಸಭಾದ ಎಲ್ಲಾ ಸದಸ್ಯರಿಗೂ ಇದೆ.
*************************
ಇಷ್ಟು ದಿನಗಳಿಂದ ಏನು ಮಾಡಿದ್ದರು ? ಅಯ್ಯೋ ತಮಗೆ ಅಧಿಕಾರ ಸಿಗಲಿಲ್ಲ..ಎಂದು ಪರಿತಪಿಸುವವರಿಗೆ ಅಯ್ಯೋ... ನನ್ನ ಕುರುಬ ಸಮಾಜ ಹಿಂದಕ್ಕೆ ಬಹಳ ಹಿಂದಕ್ಕೆ ಹೋಗುತ್ತಿದೆ. ಆ ಸಮಾಜದಲ್ಲಿ ನಾವೂ ಹುಟ್ಟಿದ್ದೇವೆ. ಆ ಸಮಾಜದ ಋಣ ನಮ್ಮ ಮೇಲಿದೆ. ಆ ಸಮಾಜದಿಂದ ಅವಕಾಶಗಳು ಸಿಕ್ಕಿವೆ.
ನಮ್ಮಲ್ಲೂ ಹೇರಳವಾಗಿ ಹಣ ಇದೆ. ಸಮಾಜಕ್ಕಾಗಿ ವಿನಿಯೋಗಿಸಬಹುದು ಎಂದು ಯಾರಾದ್ರೂ ಯೋಚಿಸಿದ್ದಿದ್ದರೆ... ???
ಎಲ್ಲರನ್ನೂ ಮೀರಿಸಿ ಬೆಳೆಯುತ್ತಿದ್ದರು "ಕರ್ನಾಟಕದ ಕುರುಬರು"
ಒಬ್ಬ ವೀರೂ ಮೋದಿ, ಒಬ್ಬ ಶಿವು ಮಗದ್ದೂಮ್ಮ, ಒಬ್ಬ ಈಶ್ವರ, ಒಬ್ಬ ವಿವನ್, ಒಬ್ಬ ಉಮೇಶ್ ರಂತಹ ನೂರಾರು ಯುವಕರಿಗಿರುವ ಮುಂದಾಲೋಚನೆ ನಮ್ಮ ಕುರುಬ ಸಮಾಜದವರಿಗೆ ಇಲ್ಲದೇ ಹೋಗುತ್ತಿದೆಯಲ್ಲ.
ನೋವಾಗುತ್ತಿದೆ. ಬೇರೆ ಸಮಾಜದವರ ಒಗ್ಗಟ್ಟು ನೋಡಿದರೆ ನಾವು ಯಾಕೆ ಹೀಗೆ ?
ಅವರುಗಳಂತೆಯೇ ನಾವುಗಳು.. ಆ ಸಮಾಜದ ರಾಜಕಾರಣಿಗಳು ತಮಗೆ ಬೇಕಾದುದ್ದನ್ನು ಮಾಡಿಸಿಕೊಳ್ತಾರೆ. ಅವರ ಮುಂದೆ ಸರ್ಕಾರಗಳು ಮಂಡಿಯೂರಿ ನಿಲ್ಲುತ್ತದೆ.
** ನಮ್ಮ ಕುರುಬರ ಸ್ಥಿತಿ.. 90% ಮತ ನೀಡಿದ್ದರೂ ಸಹ "ಅಯ್ಯಾ.... ಒಂದು ಸಚಿವ ಸ್ಥಾನ ನೀಡ್ರಯ್ಯ... ಅಂತ ಕೈ ಯೊಡ್ಡಿ ನಿಲ್ಲುವಂತಾಗಿದೆ" ನಮಗೆ ನಾಚಿಕೆಯಾಗುತ್ತಿದೆ.
** ನಮ್ಮ ಸಮಾಜದ ಯುವಕರಿಗೆ ರಾಜಕಾರಣಿಗಳನ್ನು ಓಲೈಸುವುದು, ಅವರ ಪರವಾಗಿ ಜೈಕಾರ ಹಾಕುವುದೇ ಸಮಾಜದ ಸಂಘಟನೆ ಎಂದುಕೊಂಡಿದ್ದಾರೆ. ನಾವು ಏನೇ ಮಾಡಿದರೂ ನಮ್ಮ ಸಮಾಜದವರು ತಲೆ ಬಗ್ಗಿಸಿಕೊಂಡು. ಹೇಳಿದ್ದನ್ನೆಲ್ಲಾ ನಂಬಿ ನಮ್ಮ ಹಿಂದೆ ಬರ್ತಾರೆ ಅನ್ನೋದು ಅವರುಗಳ ಮನಸ್ಸಿನಲ್ಲಿ ಕೂತು ಬಿಟ್ಟಿದೆ.
ಬದಲಾಯಿಸಬೇಕಾದರೆ ಯುವಕರು ಎಚ್ಚೆತ್ತುಕೊಳ್ಳಲೇಬೇಕು.
*** ಆ ಸಮಯವೂ ಹತ್ತಿರ ಬರುತ್ತಿದೆ. ಯುವಕರು ಜಾಗೃತರಾಗುತ್ತಿದ್ದಾರೆ.
** ಸಂಘಟನೆಯಲ್ಲಿ ನೋವು, ಅವಮಾನ, ಸೋಲುಗಳು ಸಹಜ ಅವುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಟ್ಟು, ಪ್ರಯತ್ನಗಳನ್ನು ಮಾಡುತ್ತಾ ಸಾಗಿದರೆ ಮುಂದೊಂದು ದಿನ ಗುರಿ ಮುಟ್ಟುತ್ತೇವೆ. ಸ್ವಲ್ಪ ಪ್ರಯತ್ನಗಳು ಸಾಗಲಿ..
ಯುವಕರೇ.. ನಿಮ್ಮ ಪ್ರಯತ್ನಗಳು ಮುಂದುವರೆಯಲಿ.. ಕುರುಬ ಸಮಾಜದಲ್ಲೂ ಟ್ಯಾಲೆಂಟುಗಳು ಇದ್ದಾವೆ. ಅನ್ನೋದಕ್ಕೆ ಮುತ್ತಣ್ಣ ಪೂಜಾರ್, ಹನುಮಂತ ಬಟ್ಟೂರ್.. ರಂತಹವರೇ ಸಾಕ್ಷಿ...
- ಹಾಲುಮತ ಮಹಾಸಭಾ, ಕುರುಬ ಸಮುದಾಯದ ಸಮೃದ್ಧಿಗೊಂದು ಸಮೂಹ....

Comments
Post a Comment