ನಮ್ಮ ಹಾಲುಮತ ಕುರುಬ ಸಮಾಜ ನಮಗೆ ಹೆಮ್ಮೆ ನಮ್ಮ ಕನಕ ಗುರುಪೀಠ ನಮಗೆ ಶಕ್ತಿ... ---------------------------------------------------- ಕುರುಬರ ಶಕ್ತಿ ಪೀಠ ಶ್ರೀಕಾಗಿನೆಲೆ ಕನಕಗುರುಪೀಠಕ್ಕಾಗಿ ಪ್ರತಿನಿತ್ಯ "ಒಂದೊಂದು ರೂಪಾಯಿ" ಕನಕ ಹುಂಡಿಗೆ ಹಾಕುತ್ತಿದ್ದೇವೆ. ನಮ್ಮ ಮನೆಯಲ್ಲಿ ಇಬ್ಬರು ಎರಡೆರೆಡು ರೂಪಾಯಿಗಳನ್ನು ಹಾಕುತ್ತಿದ್ದೇವೆ. ನನ್ನ ಆಫೀಸಿನಲ್ಲೂ ಒಂದು "ಕನಕ ಹುಂಡಿ"ಇಟ್ಟಿದ್ದೇನೆ. ಅಲ್ಲೂಸಹ ಒಂದೊಂದು ರೂಪಾಯಿ " ಕನಕ ಹುಂಡಿ" ಗೆ ಹಾಕುತ್ತಿದ್ದೇನೆ. ಶ್ರೇಷ್ಟ ಹಾಲುಮತ- ಕುರುಬ ಸಮಾಜದಲ್ಲಿ ಹುಟ್ಟಿದ್ದೇವೆ. ಕುರುಬರ ಸಂಘಟನೆಗಾಗಿ, ಜಾಗೃತಿಗಾಗಿ ನಮ್ಮ ಕನಕ ಗುರುಪೀಠದ ಜಗದ್ಗುರುಗಳು ಶ್ರಮಿಸುತ್ತಿದ್ದಾರೆ. ನಾವು ಮಠಕ್ಕಾಗಿ ತ್ಯಾಗ ಮಾಡಲು ಸಾಧ್ಯವಾಗುವುದಿಲ್ಲ.. ಆದರೆ ನಮ್ಮ ಕುರುಬರ ಮಠಗಳಿಗಾಗಿ " ದಿನಕ್ಕೊಂದು ರೂಪಾಯಿ" ಕೊಡಬಹುದಲ್ಲ. ಒಂದು ರೂಪಾಯಿ ನನ್ನ ಮಠದ ಅಭಿವೃದ್ಧಿಗೆ ಕೊಡುತ್ತಿದ್ದೇನೆ ಎಂಬ ಆತ್ಮ ತೃಪ್ತಿಯೂ ನನಗೆ / ನಿಮಗೆ ಇರುತ್ತದೆ. "ಮನೆಯಲ್ಲೊಂದು ಕನಕ ಹುಂಡಿ, ಸಮಾಜಕ್ಕಾಗಿ ಒಂದೊಂದು ರೂಪಾಯಿ" ಅಭಿಯಾನ ಕಳೆದ ವರ್ಷ ಕನಕ ಜಯಂತಿಯ ದಿನದಿಂದ " ಶ್ರೀಕನಕಮಾಲೆ" ಅಭಿಯಾನದಲ್ಲಿ ಪ್ರಾರಂಭಿಸಿದ್ದೇವೆ. ಈ ವರ್ಷದ 2019 ರ ನವೆಂಬರ್ ನಲ್ಲಿ ಕಾಗಿನೆಲೆಯಲ್ಲಿ ನಡೆಯುವ " ಶ್ರೀಕನಕದಾಸರ ತೊಟ್ಟಿಲೋತ್ಸವ - ಶ್ರೀ...