Skip to main content

ಕುರುಬರ ಇತಿಹಾಸ ತಿಳಿಯಬೇಕೆ? ಹಾಗಿದ್ದರೆ ಈ ಸ್ಟೋರಿ ಓದಿ

ಕುರುಬರ ಇತಿಹಾಸ ತಿಳಿಯಬೇಕೆ.‌? ಹಾಗಿದ್ದರೆ ಓದಿ.

ಮಾಳಿಂಗರಾಯ, ಬೀರದೇವರ ಬಗ್ಗೆ ನಾವು ಡೊಳ್ಳಿನ ಹಾಡುಗಳ ಮೂಲಕ
ವಿಷಯ ಸಂಗ್ರಹಿಸಬೇಕಾಗುತ್ತದೆ. ಡೊಳ್ಳಿನ ಹಾಡುಗಳನ್ನು ವ್ಯವಸ್ಥಿತ
ರೀತಿಯಿಂದ ಸಂಗ್ರಹಿಸಿ, ಪ್ರಕಟಿಸಬೇಕಾಗಿದೆ. ಈ ದಿಶೆಯಲ್ಲಿ ತಕ್ಕಮಟ್ಟಿಗೆ
ಕಾರ್ಯವಾಗಿದ್ದರೂ, ಇನ್ನೂ ಸಾಕಷ್ಟು ಸರಕಿದೆ.
ಮಾಳಿಂಗರಾಯ ಬೀರದೇವರ ಶಿಷ್ಯರಲ್ಲಿ ಅಗ್ರಗಣ್ಯನು. ಬೀರದೇವರ ಬಗ್ಗೆ
ಅನೇಕ ದಂತಕಥೆಗಳಿವೆ. ಕುರುಬ ಜನಾಂಗದ ಕುಲದೇವತೆಗಳ ಬಗ್ಗೆ
ತಿಳಿಯಲು ಹೊರಟಾಗ ಅದರ ಮೂಲವನ್ನು ಅವರು ಶಿಲಾಯುಗದಷ್ಟು ಹಿಂದಕ್ಕೆ
ಒಯ್ಯುತ್ತಾರೆ.
ಕುರುಬರ ಮೂಲಪುರುಷರ ಬಗ್ಗೆ ಒಂದು ದಂತಕಥೆ ಹೀಗಿದೆ: ಭೂಲೋಕದಲ್ಲಿ
ಶಿವ ಎತ್ತು-ಕೋಣದ ಗಳೆಹೂಡಿ ಬೇಸತ್ತು ಮಲಗಿದಾಗ ಶಿವನ ಜಟೆಯಲ್ಲಿಯ
ಸ್ವೇದಬಿಂದುಗಳಿಂದ ನಾನಾ ತರದ ಕುರಿಗಳು ಹುಟ್ಟಲು ಪಾರ್ವತಿ ಪ್ರಾಣ
ಪ್ರತಿಷ್ಠಾಪನೆ ಮಾಡಿಭೂಮಿಗೆ
ಬಿಡುತ್ತಾಳೆ.ಅವುಗಳನ್ನು ಕಾಯಲು ಮೊಲೆಹಾಲನ್ನು ಮಣ್ಣಲ್ಲಿ ಕಲಸಿ ಮಣ್ಣಿನ
ಗಂಡು-ಹೆಣ್ಣು ಗೊಂಬೆಯನ್ನು ಮಾಡುತ್ತಾಳೆ. ಅವರೇ ಮುದ್ದಪ್ಪ-
ಮುದ್ದವ್ವೆ. ಈ ದಂಪತಿಗಳ ಮಗ ಆದಿಗೊಂಡ. ಈ ಆದಿಗೊಂಡನಿಗೆ ಆರುಜನ
ಗಂಡುಮಕ್ಕಳು.
೧) ಅಮರಗೊಂಡ ೨) ಶಿವಗೊಂಡ ೩) ಬೀರುಗೊಂಡ ೪) ಮಾರುಗೊಂಡ
೫) ಮುದ್ದುಗೊಂಡ ೬) ಪದ್ಮಗೊಂಡ
ಈ ಪದ್ಮಗೊಂಡನೇ ಕುರುಬರ ಮೂಲಪುರುಷ ಎಂಬ ನಂಬಿಕೆ ಇದೆ.
ಮತ್ತೊಂದು ಕಥೆಯ ಪ್ರಕಾರ ಶಿವನ ಒಡ್ಡೋಲಗದಲ್ಲಿ ಭೃಂಗಿಯ ಸಾಧಾರಣ
ಮಟ್ಟದ ನೃತ್ಯವನ್ನು ನೋಡಿ ದೇವತೆಗಳು ನಕ್ಕಾಗ, ನಕ್ಕವರೆಲ್ಲ ಭೂಮಿಯ
ಮೇಲೆ ಕುರಿಗಳಾಗಿ ಜನ್ಮತಾಳಿರೆಂದು ಶಿವನು ಶಾಪವೀಯುತ್ತಾನೆ. ಮಸಿರೆಡ್ಡಿ-
ನೀಲಮ್ಮ ದಂಪತಿಗಳ ಉದರದಲ್ಲಿ ಆರನೆಯ ಮಗನಾಗಿ ಪದ್ಮಗೊಂಡ ಜನಿಸುತ್ತಾನೆ.
ಕುರಿ ಕಾಯಲು ಬಂದಾಗ ಬ್ರಾಹ್ಮಣ ಕನ್ಯೆಯ ಸಂಪರ್ಕ ಬರುತ್ತದೆ.
ಅವಳನ್ನು ವಿವಾಹವಾಗುತ್ತಾನೆ. ಈ ಮೊದಲೇ ಸ್ವಜಾತಿಯ
ಕನ್ಯೆಯನ್ನು ಮದುವೆಯಾಗಿದ್ದ. ಇವಳ ಹೊಟ್ಟೆಯಿಂದ ಹುಟ್ಟಿದ ಮಕ್ಕಳಿಗೆ
ಹತ್ತಿಕಂಕಣ ಕಟ್ಟಿ ಮದುವೆ ಮಾಡುತ್ತಾನೆ. ಅನ್ಯಜಾತಿಯ ಹೆಂಡತಿಯಿಂದ ಹುಟ್ಟಿಗೆ
ಮಕ್ಕಳಿಗೆ ಉಣ್ಣೆ ಕಂಕಣ ಕಟ್ಟಿ ಮದುವೆ ಮಾಡುತ್ತಾನೆ. ಹೀಗೆ ೧) ಹತ್ತಿ ಕಂಕಣ ೨)
ಉಣ್ಣೆ ಕಂಕಣ ಎಂದು ಎರಡು ಪಂಗಡಗಳಾದುವು.
ಈ ಜನಾಂಗದವರು ಮಾಡುವ ಬೇರೆ ಬೇರೆ ವೃತ್ತಿಗಳ ಆಧಾರದಿಂದ
ಇರಬಹುದು. ಅವರಲ್ಲಿ ಒಟ್ಟು ಮೂರು ಪಂಗಡಗಳಾದವು.
೧) ಹಾಲು ಕುರುಬರು ೨) ಹಂಡೆ ಕುರುಬರು ೩) ಕಂಬಳಿ ಕುರುಬರು.
ಹಾಲುಕುರುಬರು ಪಾರ್ವತಿ-ಪರಮೇಶ್ವರ ವಿವಾಹ ಕಾಲದಲ್ಲಿ ಪರಶಿವನ
ಹಸ್ತದಿಂದ ಬಿದ್ದ ಹಾಲಿನ ತೊಟ್ಟಿನಿಂದ ಸಂಭವಿಸಿದವರೆಂದು ನಂಬುತ್ತಾರೆ.
ಕುರುಬ ಜನಾಂಗದ ಮೂಲಪುರುಷ, ಕುಲದೇವತೆ, ಬೀರದೇವರು,
ಮಾಳಿಂಗರಾಯ ಮುಂತಾದವರ ಬಗ್ಗೆ ಮೂಢನಂಬಿಕೆಗಳ ಸರಮಾಲೆಯೇ ಇದೆ.
ಬೀರದೇವರ ಜನನದ ಬಗ್ಗೆಯೂ ಏಕಾಭಿಪ್ರಾಯ ಇಲ್ಲ. ಸುದೀರ್ಘವಾದ ಕಾಲದ
ಹಿನ್ನೆಲೆಯಿರುವುದರಿಂದ ದಂತಕಥೆಗಳು ಬೇರೆ ಬೇರೆ ರೂಪ ತಾಳಿವೆ.
ಬೀರದೇವರು ಪಾರ್ವತಿ-ಪರಮೇಶ್ವರರ ಬೆವರಿನಿಂದ ಬ್ರಹ್ಮಪುತ್ರನಾಗಿ ಜನಿಸಿದ.
ನಾರಾಯಣ ದೇವರ ತಂಗಿ ಸೂರವತಿ ಈತನ ತಾಯಿ. ಜೋಯಿಸರು ಹೇಳಿದರು-
’ಈ ಮಗು ಸೋದರ ಮಾವನ ಮರಣಕ್ಕೆ ಕಾರಣ.’ ನಾರಾಯಣ
ಮಗುವನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡಿದ, ವಿಫಲನಾದ.
ಪಾರ್ವತಿ ಸಂರಕ್ಷಣೆ ಮಾಡಿದಳು. ಮುಂದೆ ಈತ ದೊಡ್ಡವನಾಗಿ ಕೋಣಾಸುರನ
ಹಾವಳಿಯಲ್ಲಿ ಕುರುಬರನ್ನು ರಕ್ಷಿಸಿ ಅವರಿಗೆ ಪೂಜ್ಯನಾಗುತ್ತಾನೆ.
ಬೀರೇಶ್ವರರು ಒಂದು ದಿನ ಸೋಮರಾಯ, ತುಕ್ಕಪ್ಪರಾಯ ಅಣ್ಣ-
ತಮ್ಮಂದಿರ ಮನೆಗೆ ಬಂದಾಗ ಅವರು ಆದರದಿಂದ ಸತ್ಕರಿಸುತ್ತಾರೆ.
ಬೀರೇಶ್ವರನು ಅವರನ್ನು ಸಮಾಧಾನಪಡಿಸಿ- “ನಿಮ್ಮ ಹೊಟ್ಟೆಯೊಳಗೆ ನನ್ನ
ಪ್ರಸಾದದಿಂದ ಇಬ್ಬರು ಬಹುಪುಣ್ಯವಂತರಾದ ಮಕ್ಕಳು ಜನಿಸುತ್ತಾರೆ. ಅವರಿಗೆ
ನೀವು ಮಾಳಿಂಗರಾಯ, ಜಕ್ಕರಾಯನೆಂದು ಹೆಸರಿಟ್ಟು ಅವರನ್ನು ಮುಂದೆ
ನನ್ನ ಮಠಕ್ಕೆ ನೀಡರೆಂದು ಆಜ್ಞಾಪಿ”ಸುವನು. ಇಬ್ಬರೂ ತುಕ್ಕಪ್ಪರಾಯನ
ಮಕ್ಕಳಾಗಿ ಜನಿಸುವರು.
ಮತ್ತೊಂದು ಡೊಳ್ಳಿನ ಪದದ ಪ್ರಕಾರ ಬೀರದೇವರು ಹನ್ನೆರಡು ವರ್ಷ
ತಪಸ್ಸು ಮಾಡಿ ಶಿವನನ್ನು ಒಲಿಸಿಕೊಳ್ಳುತ್ತಾನೆ.
ಬಾರಾವರ್ಷ ಭಯಂಕರ ತಪ ಮಾಡಿ
ಆಮ್ಯಾಲ ಮಾದೇವ ಬಂದಾನ ಓಡಿ
ಏನ ಬೇಡತಿ ಬೇಡಪ್ಪ ಬಂದೀನ ನಿನ ಭಕ್ತಿ ನೋಡಿ
ವರ ಪಡೆದುಕೊಳ್ಳು ಎಂದಾಗ “ಸವಿಯಲಾರದ ಶಿಷ್ಯಮಗನನ್ನು ಕೊಡು”
ಎಂದು ಕೇಳುತ್ತಾನೆ. ಹೀಗೆ ಬೀರದೇವರು ಶಿವನ ಅನುಗ್ರಹದಿಂದ
ಮಾಳಿಂಗರಾಯ ಶಿಷ್ಯನನ್ನು ಪಡೆಯುತ್ತಾನೆ. ಮಾಳಿಂಗರಾಯ
ಬಾರಾಮತಿಯಲ್ಲಿ ಜನಿಸುತ್ತಾನೆ.
ಇನ್ನೊಂದು ನಂಬಿಕೆಯ ಪ್ರಕಾರ ಸೋಮರಾಯ-ತುಕ್ಕಪ್ಪರಾಯ ಅಣ್ಣ
ತಮ್ಮಂದಿರು ದನಗಳನ್ನು ಮೇಯಿಸುತ್ತ ಹಾಲಹವದಿ ಊರಿನ ಹತ್ತಿರ ಶಾನಭಾವನ
ಗುಡ್ಡಕ್ಕೆ ಹೋಗಿ ಹಟ್ಟಿಯಲ್ಲಿರುತ್ತಿದ್ದರು.ಸೋಮರಾಯ ಒಬ್ಬನೇ ಉಳಿದಾಗ
ಏಳುನೂರು ಜನ ಬೇಡರು ದನಗಳನ್ನು ಓಡಿಸಿಕೊಂಡು ಹೋದರು.
ಒಂದು ಗೂಳಿ ತಪ್ಪಿಸಿಕೊಂಡು ಹಾಲಹವದಿಗೆ ಹೋಗಿ ’ಅಂಬಾ’
ಎಂದು ಕೂಗುತ್ತದೆ. ದನದ ಸಂಕೇತದ ಮೇಲೆ ತುಕ್ಕಪ್ಪರಾಯನು ಮಕ್ಕಳಾದ
ಮಾಳಿಂಗರಾಯ-ಜಕ್ಕರಾಯರನ್ನು ಕರೆದುಕೊಂಡು ಹೋಗಿ
ನೋಡಲು ಸೋಮರಾಯ ತನ್ನ
ಧನುಸ್ಸಿನಿಂದಲೇ ತಾನೇ ಬಾಣವನ್ನು ಹೊಡೆದುಕೊಂಡು ಸಾಯುವ
ಸ್ಥಿತಿಯಲ್ಲಿದ್ದನು. ಬಾಣ ತೆಗೆಯುವ ಹೋದಾಗ ಸೋಮರಾಯ
“ಏಳುನೂರು ಮಂದಿ
ಬೇಡರನ್ನು ಕೊಂದು ಸೇಡುತೀರಿಸಿಕೊಳ್ಳುವದಾದರೆ, ಬೀರೇಶ್ವರನ
ಮಠಕ್ಕೆ ಸೇವೆಗಾಗಿ ಸಲ್ಲುವದಾದರೆ ಬಾಣವನ್ನು ಕೀಳಿರಿ” ಎನ್ನುತ್ತಾನೆ.
ಮಾಳಿಂಗರಾಯ-ಜಕ್ಕರಾಯ ದೊಡ್ಡಪ್ಪನಿಗೆ ವಚನ ಕೊಟ್ಟು, ಅದರಂತೆ
ಪ್ರತಿಜ್ಞೆಯನ್ನು ಪೂರೈಸುತ್ತಾರೆ.
ಗುರು-ಶಿಷ್ಯರು
ಬೀರದೇವರು-ಮಾಳಿಂಗರಾಯರದು ಒಂದು ಆದರ್ಶ ಗುರು-ಶಿಷ್ಯರ
ಜೋಡಿ. ಗುರು ಶಿಷ್ಯನನ್ನು ನಾನಾ ಪರೀಕ್ಷೆಗೆ ಗುರಿಪಡಿಸುತ್ತಾನೆ. ಶಿಷ್ಯನಿಗೆ
ಗುರುವಿನ ಪಟ್ಟು ಚೆನ್ನಾಗಿಗೊತ್ತು. ಅವನು ಅದರಲ್ಲಿ ಯಶಸ್ವಿಯಾಗುತ್ತಾನೆ.
ಇವರಿ ಹೆಜ್ಜೆ ಇರವಿಗೆ ಗೊತ್ತೋ
ಗುರುವಿನ ಹೆಜ್ಜಿ ಮಾಳಪ್ಪನ ಗೊತ್ತೊ
……………………………………………
ದೊಡ್ಡ ಗುಡ್ಡದ ಮ್ಯಾಗ ದೊಡ್ಡ ದೊಂದ ಹುಲಿಯಾಗಿ
ಗದ್ದನಿ ಹೊಡಿತಿದ್ದ ಮಾಳಪ್ಪನೋ
ಹುಲಿ ಅಲ್ಲ ನಮ್ಮ ಗುರು ಅಂತ ತೆಕ್ಕೆನಾದರ
ರೆಪ್ಪೆ-ಜೋಳನಾಗಿ ಮೈತುಂಬ ಕಡದನೋ
ರೆಪ್ಪೆ-ಜೋಳಾಗಿ ಮೈತುಂಬ ಕಡದರ
ಕುಲು-ಕುಲು ನಗತಿದ್ದ ಮಾಳಪ್ಪನೋ
ಪವಾಡಗಳು
ಮಾಳಿಂಗರಾಯ ಪವಾವೆನ್ನಬಹುದಾದ ಸಾಹಸ ಕಾರ್ಯಗಳನ್ನು ಮಾಡಿದ್ದಾನೆ.
ತನ್ನಗುರುವಿನಂತೆಯೇ ಅನ್ಯಾಯವನ್ನು ಪ್ರತಿಭಟಿಸಿದ್ದಾನೆ. ದುಷ್ಟರ
ಸಂಹಾರ. ಶಿಷ್ಟರ ರಕ್ಷಣೆಯನ್ನು ಗುರು-ಶಿಷ್ಯರು ತಮ್ಮ ಪೌರುಷ
ಪರಾಕ್ರಮದಿಂದ, ಆತ್ಮಬಲದಿಂದ ನೆರವೇರಿಸಿದ್ದಾರೆ. ಈ ಕಾರಣಕ್ಕಾಗಿ ಏನೋ ಅವರ
ಭಕ್ತರು ಭೀರ ದೇವರ ಚರಿತ್ರೆಯನ್ನು ಕೃಷ್ಣನ ಪಾತ್ರಕ್ಕೆ ಸಮಾಂತರವಾಗಿ ಪ್ರತಿ
ಕೃಷ್ಣನ ಪಾತ್ರ ಸೃಷ್ಟಿಯನ್ನು ಮಾಡಲು ಪ್ರಯತ್ನಿಸಿದಂತೆ ತೋರುತ್ತದೆ.
೧. ಏಳುನೂರು ಬೇಡರನ್ನು ಸಂಹರಿಸಿದ್ದು:
ಸೋಮರಾಯನಿಗೆ ವಚನ ಕೊಟ್ಟಂತೆ ಬೇಡರ
ಉಪಟಳವನ್ನು ಕೊನೆಗಾಣಿಸುತ್ತಾರೆ. ಔದ್ಯೋಗೀಕರಣದ ಅಂಕುರವಾಗದ ಆ
ಕಾಲದಲ್ಲಿ ಕೃಷಿಯೇ ಉಪಜೀವನದ ಏಕಮೇವ ದಾರಿಯಾಗಿತ್ತು.
ಜಾನುವಾರುಗಳು ಪ್ರಮುಖ ಆಸ್ತಿ-ಪಾಸ್ತಿ. ಅವುಗಳ ಅಪಹರಣ
ಸರ್ವೇಸಾಮಾನ್ಯ. ಗುಡ್ಡಗಾಡುಗಳಲ್ಲಿ ಲೂಟಿ, ದರೋಡೆ ಹೆಚ್ಚಾಗಿ ಮುಗ್ಧ
ಜನತೆಯ ಉಪಜೀವನ ಕಷ್ಟಕರವಾಗಿರಬಹುದು. ಅಂಥ ಸಾಮಾಜಿಕ ಪರಿಸರದಲ್ಲಿ ಈ
ಧೀರರು ಶೋಚನೀಯ ಪರಿಸ್ಥಿತಿಯನ್ನುಹತೋಟಿಗೆ ತಂದು ಜನ
ಸಾಮಾನ್ಯರ ಆರಾಧ್ಯದೇವತೆಗಳಾದರೆಂದು ತೋರುತ್ತದೆ.
ಸೋದರ ಜಕ್ಕರಾಯನ ಜೊತೆಗೆ ಬೇಡರ ಗುಂಪನ್ನು ಚಂಡಾಡಿ
ಉಮದಿಗ್ರಾಮದಲ್ಲಿ ರುಂಡಗಳನ್ನು ರಾಶಿಹಾಕಿ ಚಕ್ರಕಟ್ಟೆಯನ್ನು ಕಟ್ಟಿದನು.
ಉಮದಿಯಲ್ಲಿ ಚಕ್ರಕಟ್ಟೆಯನ್ನು ಈಗಲೂ ತೋರಿಸುತ್ತಾರೆ.
ಬೀರೇಶ್ವರನು ಇಬ್ಬರಿಗೂ ಮದುವೆ ಮಾಡಿದನು.
ಜಂತೀ ನಾರಾಯಣಪುರದಲ್ಲಿ ನೆಲೆಸಿರಿ ಎಂದು ಆಜ್ಞಾಪಿಸಿದನು.
೨. ಹುಲಿಗಿಣ್ಣಿ ಕಾಸಿ ಕೊಟ್ಟದ್ದು:
ಗುರು ಬೀರದೇವರು ಶಿಷ್ಯನನ್ನು ಅಸಾಧ್ಯವೆನ್ನುಂತಹ
ಕಾರ್ಯಗಳನ್ನು ಮಾಡುವಂತೆ ಪರೀಕ್ಷೆಗೆ ಒಡ್ಡುತ್ತಾನೆ. ಹುಲಿಯ ಹಾಲಿನ ಗಿಣ್ಣ
ಮಾಡಿಕೊಡು ಎಂದು ಕೇಳುತ್ತಾನಂತೆ. ಅದರಲ್ಲೂ ಕರಿಹುಲಿಯ ಗಿಣ್ಣ
ಎಂದುಹಾಡುಗಳಲ್ಲಿ ಬರುತ್ತದೆ. ಮತ್ತೊಮ್ಮೆ ಮಾಳಪ್ಪ ’ಕರಿಮಲ್ಲಿಗೆ’
ತಂದು ಗುರುವನ್ನು ಪೂಜಿಸುತ್ತಾನೆ. ’ಕರಿಮಲ್ಲಿಗೆ’ ಪ್ರಸಂಗ
ಒಂದು ಖಂಡಕಾವ್ಯದಂತಿದೆ. ಶ್ರೀ ಸಿದ್ಧಣ್ಣ ಜಕಬಾಳ
ಅವರು ಅದನ್ನು ಗೀರೂಪಕವಾಗಿ ರಂಗಭೂಮಿಯ ಮೇಲೆ ತಂದಿದ್ದಾರೆ.
ಕರಿಹುಲಿ, ಕರಿಮಲ್ಲಿಗೆ ಈ ಮಾತುಗಳನ್ನು ನೋಡಿದಾಗ ’ಕರಿ’ ಎಂಬ
ಶಬ್ದವನ್ನು ಅವರು ವಿಶಿಷ್ಟ ಅರ್ಥದಲ್ಲಿ ಪ್ರಯೋಗಿಸಿದಂತೆ ತೋರುತ್ತದೆ. ಖರೆ
(ಸತ್ಯ) ಎಂಬುದಾಗಲೀ, ಕರಿಬಣ್ಣ ಆ ಜನಾಂಗಕ್ಕೆ
ಪ್ರಿಯವೆನ್ನುವದಾಗಲೀ ಸಮರ್ಪಕವೆನಿಸುವದಿಲ್ಲ.
ಮಾಳಿಂಗರಾಯ ಹುಲಿಯಗಿಣ್ಣ ತಂದುಕೊಟ್ಟ ಬಗ್ಗೆ ಒಂದು ಡೊಳ್ಳಿನ ಪದದ
ಸಾಲುಗಳು ಹೀಗಿವೆ:
ಸಿಡಿಯಾಣ ಮಠದಾಗ ಸಿದ್ಧಮಾಳಪ್ಪ ಸೇವಾ ಮಾಡ್ಯಾನಾಗ
ಕರಿಹುಲಿಗಿಣ್ಣ ಹುಲಿಮರಿ ಕೂನ ಗುರುವ ಬೇಡ್ಯಾನಾಗ
ಹೋಮದ ಕಂಬಳಿ ನೇಮದ ಬೆತ್ತ ಹಿಡಿದ ಮಾಳಪ್ಪ ಹೊಂಟಾನಾಗ
…………………………………………………………………………
ಮಾಳಪ್ಪ ಹೊರ್ತಿ-ನಿಂಬಾಳ ಗುಡ್ಡದ ಮ್ಯಾಲ ಹೋಗ್ಯಾನಾಗ
ಹುಲಿಮರಿ ಆಗಿಕೂಗ್ಯಾನಾಗ
ಗುಡಗ ಹೊಡದ ಹುಲಿ ಓಡಿ ಬಂದರ ಭಂಡಾರ ಹೊಡದಾನಾಗ
ಗೆಜ್ಜೆ-ಗುಂಡಿಗಿ ಹಿಡದ ಮಾಳಪ್ಪ ಹಾಲ ಹಿಂಡ್ಯಾನಾಗ
ಹುಲಿಮರಿ ಕೂನ ತಂದಾನಾಗ
ಹುಲಿಹಾಲ ಹೊತಗೊಂಡ ಗುರುವಿನ ಸೇವಕ ಬಂದಾನಾಗ
ಹೊರಗ ಹೋಮಹೂಡಿ ಸಿದ್ಧಮಾಳಪ್ಪ ಗಿಣ್ಣ ಕಾಸ್ಯಾನಾಗ
ಮಾಳಪ್ಪ ಗುರಿವಿಗೆ ಉಣಸ್ಯಾನ ಆಗ
ಗುರುವಿನ ಉಣಸಿ ಸಿದ್ಧಮಾಳಪ್ಪ ಅಲಗ ಹಾದಾನಾಗ
ಹುಲಿಮರಿ ಕೂನ (ಗುರುತು) ತಂದು ಆ ಮರಿಗಳನ್ನು ಅವನು ಸಾಕಿದಂತೆ
ತೋರುತ್ತದೆ. ಮಾಳಪ್ಪನನ್ನು ಎಡಕ್ಕೊಂದು, ಬಲಕ್ಕೊಂದು ಹುಲಿಮರಿಗಳ
ಜೊತೆ ಚಿತ್ರೀಸಿರುತ್ತಾರೆ. ಹುಲಿಜಂತಿಯಲ್ಲಿ ಮತ್ತೆ ಬೇರೆ ಬೇರೆ ಬೀರದೇವರ
ಗುಡಿಗಳಲ್ಲಿ ಭಿತ್ತಿಗಳ ಮೇಲೆ ಇಂಥ ಚಿತ್ರಗಳನ್ನು ಕಾಣಬಹುದು.
ಅಲ್ಲದೆ, ಹುಲಜಂತಿ ಗ್ರಾಮಕ್ಕೆ ಆ ಹೆಸರು ಬರಲು ಮಾಳಪ್ಪ ಹುಲಿಗಳ ಜೊತೆ
ಇರುತ್ತಿದ್ದುದೇ ಕಾರಣವಿರಬೇಕು ಎನ್ನುತ್ತಾರೆ. ಭಾಷಾಶಾಸ್ತ್ರದ
ಪುಷ್ಟಿಯೂ ಅದಕ್ಕೆ ದೊರಕುತ್ತದೆ. ಅದು ಹೀಗೆ: ಹುಲಿಜೊತೆ > ಹುಲಿಜತಿ >
ಹುಲಿಜತ್ತಿ > ಹುಲಜಂತಿ.
೩. ಶೀಲವಂತಿಯನ್ನು ಸೋಲಿಸಿದ್ದು:
ಮಾಳಿಂಗರಾಯನ ತಪೋಭಂಗ ಮಾಡಲು ವೀಳ್ಯಯೆತ್ತಿದ ಶೀಲವಂತಿ
ತಾನೇ ಸೋಲುತ್ತಾಳೆ. “ಅದು ಪ್ರಭುದೇವ-ಮಾಯಾವತಿಯರ
ಕಥಾಸಂದರ್ಭವನ್ನು ನೆನಪಿಗೆ ತರುತ್ತದೆ… ಹುಲಜಂತಿ
ಗ್ರಾಮವು ಮಾಳಪ್ಪದೇವನಿಗೆ ನೆಲೆಯಾದಂತೆ, ಸಿಡಿಯಾಣ (ಶಿರಾಡೋಣ)
ಗ್ರಾಮವು ಶೀಲವಂತಿಗೆ ನೆಲವಾಗಿ ಬಿಡುವುದು”. [1]
ಅಂತು ಮಾಳಪ್ಪನ ಸ್ವಂತ್ಹೋಗಿ
ತರತೀನ ದೀಡ ತಾಸಿನಲ್ಲಿ-(ದ್ಯಾಮವ್ವ)
ಹ್ವಾದರ ಅಲ್ಲಿ ಬರುದಿಲ್ಲ ಇಲ್ಲೆ-(ಪರಮೇಶ್ವರ)
ಬಂಡಿ ಹೊಡೆದಾರಾಗೋ
ಮಾಳಪ್ಪ ಭಗತಿವಾನ ಭವದಾಗೋ
ಬಂಡಿಯ ಗಾಲಿ ತುಂಡಾಗಿ ಬಿದ್ದಾವೋ
ಮುತ್ತಲಮೋರಿ ಹಳದಾಗೋ[2]
ಅವಳ ಮೂಗುತಿ ಕಳೆದುಹೋಗುತ್ತದೆ. ಹಳ್ಳದಲ್ಲಿ ಹುಡುಕಾಡುತ್ತಾಳೆ.
ನಿನ್ನುಡಿಯಲ್ಲಿಯೇ ಇದೆ ನೋಡು ಎನ್ನುತ್ತಾನೆ ಮಾಳಪ್ಪ. ಶೀಲವಂತಿ
ಸೋತು ಸಿಡಿಯಾಣದಲ್ಲಿಯೇ ಉಳಿಯುತ್ತಾಳೆ.
ಕೊಣ್ಣೂರ ಮಠದಾಗ ಮಾಳಿಂಗರಾಯ ಕೊಂಡ ಹಾರ್ಯಾನೇನರೀ
ಮುಂಡಗನೂರ ಮಡ್ಡಿಮ್ಯಾಗ ಉದಿಯ ಆದಾನೇನರೀ
ಕೊಣ್ಣೂರಲ್ಲಿ, ಅಗ್ನಿಕುಂಡದಲ್ಲಿ ಹಾರಿ. ಮುಂಡಗನೂರಿನಲ್ಲಿ-
ಪ್ರತ್ಯಕ್ಷವಾದದ್ದು, ಜಡಿಸಿದ್ದರನ್ನು ಸೋಲಿಸಿದ್ದು, ಅಲಗ ಹಾಯ್ದದ್ದು,
ಬಂಗಾಲಿ ವಿದ್ಯೆಯವರನ್ನು ಸೋಲಿಸಿದ್ದು ಮುಂತಾದ
ವಿಷಯಗಳನ್ನು ಹೇಳುವ ಡೊಳ್ಳಿನ ಹಾಡುಗಳನ್ನು ಹಾಡುತ್ತಾರೆ.
೪. ಮುಂಡಾಸ ಮಹಿಮೆ:
ಸತ್ಯುಳ್ಳ ಶರಣ, ಸಿದ್ಧಮಾಳಪ್ಪ ಇಂಥ ಮಾತುಗಳನ್ನು ಹಾಡುಗಳಲ್ಲಿ
ಪದೇ ಪದೇ ಕೇಳುವುದರಿಂದ ಅವನು ಮಾಡಿದ ಅನೇಕ
ಪವಾಡಗಳನ್ನು ಕುರಿತಾದ ಹಾಡುಗಳನ್ನು ನೋಡಿದರೆ ಅವನೊಬ್ಬ
ಯೋಗಿಪುರುಷನಿರಬೇಕೆನಿಸುತ್ತದೆ. ಆತನದು ಬಂಗಾಲಿ ಜಾದೂ ಅಲ್ಲ:
ಅಲ್ಲಮಪ್ರಭುದೇವರ ಹಾಗೆ ಸಿದ್ಧಪುರುಷನೆಂದು ತೋರುತ್ತದೆ.
ಹುಲಜಂತಿಯಲ್ಲಿ ಪ್ರತಿ ವರುಷ ದೀಪಾವಳಿ ಅಮವಾಸ್ಯೆಗೆ ಮಾಳಪ್ಪನ ಜಾತ್ರೆ
ಕೂಡುತ್ತದೆ, ಅಮವಾಸ್ಯೆಯ ರಾತ್ರಿಯೇ ಈ ಪವಾಡ ನಡೆಯುತ್ತದೆ.
ಸಾವಿರಾರು ಭಕ್ತರು ಬಹುದೂರದಿಂದ ಬರುತ್ತಾರೆ.
“ಕೈಯ್ಯಾಗ ಅಲಗ ಹಿಡದಿದ್ದ| ತನ್ನ ಹೊಟ್ಟಿಗೆ ಹೊಡದಿದ್ದ
ಭಂಡಾರ ಹೊಡದ ಅಲಗ ಕಿತ್ತಿದ್ದ”
ಶಿವನು ಅವನ ಭಕ್ತಿಗೆ ಮೆಚ್ಚಿ ವರ್ಷಕ್ಕೊಮ್ಮೆ ಅವನಿಗೆ ಮುಂಡಾಸ ಸುತ್ತುತ್ತಾನೆ.
ಆತನ ಭಕ್ತಿಯನ್ನು ಪ್ರಕಟಗೊಳಿಸುತ್ತಾನೆ.
ಜತ್ತ ಸಂಸ್ಥಾನಿಕರು ಇದರ ರಹಸ್ಯವನ್ನು ಅರಿಯಲು ಹೋಗಿ ಕಷ್ಟಕ್ಕೆ
ಗುರಿಯಾಗುತ್ತಾರೆ. ಅಂದಿನಿಂದ ಜತ್ತ ಸರಕಾರದ ನೈವೇದ್ಯೆ
ಮೊದಲು ಬಂದನಂತರವೇ ಉಳಿದವರ ನೈವೇದ್ಯೆ ಸ್ವೀಕರಿಸುವ ರೂಢಿ
ಬಂದಿದೆಯಂತೆ.
ಹುಲ್ಲ ಮಾನವರೆಲ್ಲ ಗುಲ್ಲ ಮಾಡೂದು ಕಂಡ ಕಳಸಕ ಸುತ್ತಿತೋ
ಜತ್ತ ಸರಕಾನ ಸೊಕ್ಕ ಮುರಿಸಿತೋ ಅವನ ನೈವೇದ್ಯೆ
ಮೊದಲಿಗೆ ಬಂತೋ|………
ಹುಲಿಜಂತಿ ಊರಾಗ ಕವಿ ಭಾಳ ಶಿಸ್ತೋ|
ಅಡಿವೆಪ್ಪ ಪೂಜಾರಿ ಹೇಳ್ಯಾನ ಮಸ್ತೋ|
ಮಾಳಿಗಿರಾಯನ ಕಥಿ ಕೇಳಿರಿ ಕುಂತೋ|
ವರ್ಷಕ್ಕೊಮ್ಮೆ ಜಾತ್ರೆ ನಡಸತಾನ ಮಸ್ತೋ|
ಹುಲಜಂತಿ ಈಗ ಸೊಲ್ಲಾಪುರ ಜಿಲ್ಲೆಯ ಮಂಗಳವೇಢೆ ತಾಲ್ಲೂಕಿನ
ಒಂದು ಗ್ರಾಮ. ಬಿಜಾಪುರದಿಂದ ಉತ್ತರಕ್ಕೆ ನೇರವಾಗಿ ಕೊಂತೆವ್ವನ
ಬಬಲಾದಿ, ಅಲ್ಲಿಂದ ಹಳ್ಳಿ ಎಂಬ ನಗರ, ಉಮದಿ ತರುವಾಯ ಹುಲಜಂತಿಗ್ರಾಮ
ಸಿಕ್ಕುತ್ತದೆ. ಹಾಲಹಳ್ಳ ಹರಿದು ಭೀಮಾ ನದಿಗೆ ಕೂಡುತ್ತದೆ. ಇಲ್ಲಿ
ಮಾಳಿಂಗರಾಯನ ಸಮಾಧಿ ಇದೆ; ಮೂರ್ತಿ ಇಲ್ಲ, ಗುಡಿಯ ಪೂಜಾರಿಗಳಿಗೆ
’ಮಾರಾಯಗೋಳ’ ಎನ್ನುತ್ತಾರೆ. ಕೋಟಿ ಕೋಟಿ ಭಕ್ತರು ಅಲ್ಲಿ
ಸೇರುತ್ತಿದ್ದರಂತೆ. ಯಾರೋ ಒಬ್ಬರು ಎಣಿಸಿದರಂತೆ, ಅವರಿಗೆ
’ಕೋಟ್ಯಾಗೋಳ’ ಎಂಬ ಅಡ್ಡಹೆಸರು ಬಂತಂತೆ. ಈಗಲೂ ಆ
ಅಡ್ಡಹೆಸರಿನವರಿದ್ದಾರೆ. ಸ್ವಾಮಿಗಳೋ, ಅಯ್ಯಗೋಳ ಎಂದು ನಮ್ಮಲ್ಲಿ
ರೂಢಿಯಲ್ಲಿರುವ ಹಾಗೆ ಇದೆ.
ಮಾಳಪ್ಪನಿಗೆ ಬಂಜೆಯರು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅಂಥ
ಬಂಜೆಯರು ತಮಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬನನ್ನು ಮಠಕ್ಕೆ
ಸೇವೆಗೆಂದು ಅರ್ಪಿಸಬೇಕು. ಅವರಿಗೆ ಶಿಷ್ಯ ಮಕ್ಕಳು,
ಆಳುಮಕ್ಕಳು ಎನ್ನುತ್ತಾರೆ. ಅವರ ಸಮಾಧಿಗಳೂ ಪಕ್ಕದಲ್ಲಿವೆ. ಜಾತ್ರೆಯಲ್ಲಿ
ಭಂಡಾರ, ಉಣ್ಣೆ ಹಾರಿಸುತ್ತಾರೆ. ಮುಂಡಾಸ ಸುತ್ತುವ ರಾತ್ರಿ ಗುಡಿಯ
ಸಮೀಪ ಯಾರೂ ಉಳಿಯುವುದಿಲ್ಲ. ರಾತ್ರಿ ದೂರದ
ಮೈದಾನು ಹೊಲಗಳಲ್ಲಿ ತಂಗಿದ್ದು ಬೆಳಗಿನ ಜಾವ ಧಾವಿಸಿ ಬರುತ್ತಾರೆ.
ಕಡೋಳಿ ಜಾತ್ರೆಯಲ್ಲಿ ಅಲಗು ಹಾಯುವದನ್ನು ನೋಡಲು ಜನ
ಸೇರುತ್ತಾರೆ.
ಅನೇಕ ಊರುಗಳಲ್ಲಿ ಮಾಳಿಂಗರಾಯನ ಗುಡಿಗಳಿವೆ. ಗರ್ಭಗುಡಿಯಲ್ಲಿ ಕರಿಯ
ಕಂಬಳಿಯ ಗದ್ದುಗೆ ಇದ್ದೇ ಇರುತ್ತದೆ. ಪ್ರತಿ ರವಿವಾರ ಡೊಳ್ಳಿನ
ಹಾಡುಗಳನ್ನು ಹಾಡುತ್ತಾರೆ. ಅಮವಾಸ್ಯೆಯ ರಾತ್ರಿ ವಿಶೇಷ
ಕಾರ್ಯಕಲಾಪಗಳಿರುತ್ತವೆ.
ಬೇರೆ-ಬೇರೆ ಉತ್ಸವದ ಸಂದರ್ಭಗಳಲ್ಲಿ ಇಂಥ ಹಾಡಿನ ಮೇಳಗಳನ್ನು ಕರೆಸಿ
ಹಾಡಿಸುತ್ತಾರೆ. ೫-೧೦ಜನರು ಒಂದು ಮೇಳದಲ್ಲಿರುತ್ತಾರೆ.
ಎರಡೆರಡು ಮೇಳಗಳು ಎದುರಾಗಿ ಪೈಪೋಟಿಯಿಂದ
ಸೂರ್ಯೋದಯದವರೆಗೂ ಹಾಡುಗಳನ್ನು ಹೇಳುತ್ತವೆ. ಭಂಡಾರದ
ಲೇಪನ, ಮೇಳದ ಮಧ್ಯಭಾಗದಲ್ಲಿ ಬೆಲ್ಲದ ಪುಡಿ ಸಾಮಾನ್ಯವಾಗಿ
ಎದ್ದು ಕಾಣುವ ಅಂಶಗಳು. ಗಂಟಲು ಆರಿ ಬಂದಾಗ ಬಾಯಲ್ಲಿ ಬೆಲ್ಲದ
ಹಳಕನ್ನು ಹಾಕಿಕೊಳ್ಳುತ್ತಾರೆ. ಹಾಲುಮತದವರಲ್ಲದೆ
ಬ್ರಾಹ್ಮಣರನ್ನುಮೊದಲು ಮಾಡಿಕೊಂಡು ಶೂದ್ರರವರೆಗೆ ಎಲ್ಲ ಜಾತಿಯ
ಜನರು ಈಮೇಳಗಳನ್ನು ಕಟ್ಟಿಕೊಂಡು ಹೆಸರುಗಳಿಸಿದ್ದಾರೆ.
ಮಾಳಪ್ಪ, ಮಾಳಿಗ, ಮಾಳಯ್ಯ, ಮಾಳವ್ವ ಈ ಹೆಸರುಗಳು ಈಗಲೂ ಕರ್ನಾಟಕ,
ಆಂದ್ರ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಳಕೆಯಲ್ಲಿವೆ.
ಶಿವಮೊಗ್ಗೆಯವರೆಗೂ ಮಾಳಿಂಗರಾಯನ ಗುಡಿಗಳು ಕಾಣಸಿಗುತ್ತವೆ.
ಇದು ಮಾಳಿಂಗರಾಯನ ಕೀರ್ತಿಯ ವ್ಯಾಪ್ತಿಯನ್ನು ಸೂಚಿಸುತ್ತದೆ.
ಮಾಳಪ್ಪ ಎನ್ನುವುದೇ ಮೂಲಶಬ್ಧ, ಅದು
ಮಾಳಪ್ಪ>ಮಾಲಿಂಗ>ಮಾಳಿಂಗ>ಮಾಳಿಂಗರಾಯ
ಹೀಗೆ ಮಾರ್ಪಾಡಾಗಿರಬೇಕು. ’ರಾಯ’ ಎನ್ನುವ ಪದ ವಿಜಯನಗರದ ಅರಸರ
ಕಾಲದಿಂದೀಚೆಗೆ ಪ್ರಚಾರದಲ್ಲಿ ಬಂದಿರಬೇಕು.
ಅರಕೇರಿ ಅಮೋಘಸಿದ್ಧನ ಹೆಂಡತಿ ಪದ್ಮಾವತಿ ಮತ್ತು ಮಾಳಿಂಗರಾಯನ ಹೆಂಡತಿ
ಈರವ್ವ ಚಿಗದೊಡಪ್ಪನ ಮಕ್ಕಳಂತೆ.
ಸಮಕಾಲೀನರಾದ ಇವರಲ್ಲಿ ಒಬ್ಬರ ಬಗ್ಗೆ ಪುರಾವೆಗಳು, ಆಧಾರಗಳು ಲಭ್ಯವಾಗಿ
ಕಾಲನಿರ್ಣಯವಾದರೆ ಎಷ್ಟು ಅನುಕೂಲ! ಅಲ್ಲಿಯವರೆಗೆ ಮಾಳಿಂಗರಾಯ
ಹತ್ತು ಶತಮಾನಕ್ಕಿಂತ ಹಿಂದೆ ಆಗಿಹೋದ ಒಬ್ಬ ಚಾರಿತ್ರಿಕ ವ್ಯಕ್ತಿ, ಸತ್ಯ ಶರಣ
ಎಂದಿಟ್ಟುಕೊಳ್ಳಬಹುದು.
ಜುಂಜಪ್ಪನ ಭಕ್ತರಾದ ಕಾಡುಗೊಲ್ಲರಿಗೂ ಕುರುಬರಿಗೂ ಆಚಾರ-
ವಿಚಾರಗಳಲ್ಲಿ ಬಹಳಷ್ಟು ಸಾಮ್ಯ ಕಂಡುಬರುತ್ತದೆ. ಮೂಲದಲ್ಲಿ ಇವರೆಲ್ಲ
ಒಂದೇ ಬುಡಕಟ್ಟಿಗೆ ಸೇರಿದವರಾಗಿರಬೇಕು. ಪ್ರಾದೇಶಿಕ
ಅಂಶಗಳು ಸೇರ್ಪಡೆಯಾಗಿ ಕಾಲಾಂತರದಲ್ಲಿ ಬೇರೆ ಜಾತಿಯಾಗಿ
ಪರಿಣಮಿಸಿರಲಿಕ್ಕೆ ಸಾಕು. ಪ್ರಾಯಶಃ ಈ ನಾಡಿಗೆ ಅವರೇ ಮೂಲ ಪುರುಷರು.
ಮಹಾರಾಷ್ಟ್ರದ ದಕ್ಷಿಣ ಭಾಗದಿಂದ ನದೀತೀರಗಳ ಗುಂಟ ಕರ್ನಾಟಕದ ದಕ್ಷಿಣ
ಭಾಗದ ಕಡೆಗೆ ಬರುವ ಒಂದು ಪಟ್ಟಿಯಾಕಾರದ ಪ್ರದೇಶದಲ್ಲಿ ವಿಶೇಷವಾಗಿ ಈ
ಜನಾಂಗ ನೆಲೆನಿಂತು ಹಟ್ಟಿಗಳನ್ನು ಕಟ್ಟಿಕೊಂಡಂತೆ ತೋರುತ್ತದೆ.
ಕೃಷ್ಣಾ, ಭೀಮಾ, ಮಲಪ್ರಭಾ, ಘಟಪ್ರಭಾ ಈ ನದಿತೀರಗಳಲ್ಲಿ
ನಾವು ವಿಶೇಷವಾಗಿ ಮಾಳಿಂಗರಾಯ, ಭೀರದೇವರ
ಗುಡಿಗಳನ್ನು ಕಾಣುತ್ತೇವೆ.
ಕೃಷ್ಣಾ ನದಿಯ ಪಕ್ಕದ ಈ ಊರುಗಳ ಹೆಸರುಗಳನ್ನು ಗಮನಿಸಿ: (ಜಮಖಂಡಿ
ತಾಲ್ಲೂಕು).
ಬನಹಟ್ಟಿ, ಯಲ್ಲಟ್ಟಿ, ಕಡಪಟ್ಟಿ ಇತ್ಯಾದಿ.
ಬನಹಟ್ಟಿಯಲ್ಲಿಯ ಕೆಲವು ಮನೆತನಗಳ ಅಡ್ಡ ಹೆಸರುಗಳು: ಹಟ್ಟಿ, ಹೊಸಟ್ಟಿ, ಸುಲಟ್ಟಿ,
ಯಲ್ಲಟ್ಟಿ, ಕರಲಟ್ಟಿ, ದೆಶೆಟ್ಟಿ ಇತ್ಯಾದಿ.
ಜುಂಜಪ್ಪನವರು ಎಂಬ ಅಡ್ಡ ಹೆಸರಿನ ಮನೆತನವೂ ಇದೇ ಭಾಗದಲ್ಲಿದೆ
ಎಂಬುದು ಗಮನಾರ್ಹ.
ಮಾಳಿಂಗರಾಯ ಒಬ್ಬ ಚಾರಿತ್ರಿಕ ವ್ಯಕ್ತಿ. ಆತ ಮಹಾಭಕ್ತ, ಶೂರ, ಸತ್ಯಶರಣ, ಆತನ
ಭಕ್ತರು, ಅನುಯಾಯಿಗಳು ಅವನನ್ನು ಪೌರಾಣಿಕ ವ್ಯಕ್ತಿಯಂತೆ
ಚಿತ್ರಿಸಿದ್ದು ಕಂಡುಬರುತ್ತದೆ.

Comments

Post a Comment

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...