Skip to main content

ಹಂಪಿಯ ವಿರುಪಾಕ್ಷನೇ ಕುರುಬರ ಬೀರಪ್ಪ !!!!

ಕುರುಬರ ಇತಿಹಾಸ ಪರಂಪರೆ,

ಹಂಪಿಯ ವಿರುಪಾಕ್ಷನೇ ಕುರುಬರ ಬೀರಪ್ಪ !!!!
( ಕೆಲವು ಹೊಸ ಹೊಳವುಗಳು)

ಮಾನ್ಯ ಹಾಲುಮತ ಸಮಾಜದ ಅಧ್ಯಯನಪ್ರಿಯ ಮಿತ್ರರೆ ಮತ್ತು ಯುವಕರೆ,
"ವಿಜಯನಗರ ಸಾಮ್ರಾಜ್ಯ" ಸ್ಥಾಪನೆ ಮಾಡಿದ ಸಂಗಮ ವಂಶಸ್ಥರು ಕುರುಬ ಕುಲಪುತ್ರರೆಂದು ಭಾರತೀಯ ಮತ್ತು ವಿದೇಶಿ ವಿದ್ವಾಂಸರು ಸಾಬೀತು ಪಡಿಸಿದ್ದಾರೆ. ರಾಬಟ೯ ಸಿವೆಲ್, ಜಾನ್ ಕೆಲ್ಸೆಲ್, ಗಸ್ಟೋವ್ ಅಪಟ೯, ಡಾ.ಗ್ರೀಗೆ, ಎಂತೋವೆನ್ ಮೊದಲಾದ ವಿದೇಶಿ ವಿದ್ವಾಂಸರು ಹಾಗೂ ಡಾ. ವಸುಂದರಾ ಫಿಲಿಯೋಜ, ಡಾ. ಸಾಲೆತೋರ್, ಡಾ. ಎಂ.ಎಂ. ಕಲಬುಗಿ೯, ಎಸ್. ಶ್ರೀಕಂಠಯ್ಯ, ಡಾ.ಪಿ.ವಿ.ಕೃಷ್ಣಮೂತಿ೯ ಮೊದಲಾದ ೫೦ಕ್ಕೂ ಹೆಚ್ಚು ವಿದ್ವಾಂಸರು ಸಂಗಮರು ಕುರುಬರೆಂದೇ ಹೇಳಿದ್ದಾರೆ. ಇವರು ಪ್ರಾಚೀನ ಕಾಲದ ಶಾಸನ, ಕಾವ್ಯ, ಕೈಪಿಯತ್ತು, ವಚನ , ದಾಖಲೆಗಳನ್ನು ಅಧ್ಯಯನ ಮಾಡಿ, ಈ ತೀಮಾ೯ನಕ್ಕೆ ಬಂದಿರುತ್ತಾರೆ.

ಆದರೆ ಇವೆಲ್ಲವನ್ನು ಹೊರತುಪಡಿಸಿ, ಪ್ರಸ್ತುತ ದೇವಾಲಯಗಳ ಶಿಲ್ಪಗಳು, ಆಚರಣೆಗಳು, ಸಂಪ್ರದಾಯ ಮತ್ತು ನಡಾವಳಿಗಳ ಆಧಾರದ ಮೇಲೆ ಅಧ್ಯಯನ ನಡೆಸಿದ  ಬಳ್ಳಾರಿಯ "ಹಾಲುಮತ ಹುಕ್ಕಬುಕ್ಕ ಪ್ರತಿಷ್ಟಾನ" ದ ಯುವ ಅಧ್ಯಯನಕಾರರು ಅನೇಕ ಹೊಸ ಹೊಳವುಗಳನ್ನು ಕಂಡುಕೊಂಡಿದ್ದಾರೆ. ಡಾ. ಲಿಂಗದಹಳ್ಳಿ ಹಾಲಪ್ಪ ಅವರ ನೇತೃತ್ವದ ಅಧ್ಯಯನ ತಂಡದ ಶ್ರೀ ವೆಂಕಟೇಶ, ಶ್ರೀ ಟಿ.ಕೆ. ಕಾಮೇಶ, ಶ್ರೀ ಪೋಲಯ್ಯ ಮೊದಲಾದ ಯುವಕರ ಕಾಯ೯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವಂತಹುದಾಗಿದೆ.

 ಕನಾ೯ಟಕದ ಕುರುಬ ಸಮಾಜ ಈ ಯುವಕರ ಕಾಯ೯ವನ್ನು ಗಮನಿಸಿ ಅಭಿನಂದಿಸಲೇಬೇಕು.

ಹೊಸ ಹೊಳವುಗಳು

೧. ಕುರುಬ ಸಮುದಾಯದ ಕುಲದೈವ ಶ್ರೀ ಬೀರದೇವರು. ಇಂದಿಗೂ ಈ ದೇವರ ಆಚರಣೆಯಲ್ಲಿ ಈರಗಾರರು ಮತ್ತು ದಳವಾಯಿಗಳನ್ನು ಕಾಣುತ್ತೇವೆ. ಇವರು ಬೀರಪ್ಪನ ವೀರಗಣಗಳು. ಹಂಪಿಯ ವಿರುಪಾಕ್ಷ ಕುರುಬರ ಬೀರಪ್ಪ ಎನ್ನುವುದಕ್ಕೆ ಸಾಕ್ಷಿಯಾಗಿ, ವಿರುಪಾಕ್ಷ ದೇವಾಲಯದ ಕಂಬದ ಮೇಲೆ ಈರಗಾರನ ಚಿತ್ರವಿದೆ.(ಚಿತ್ರ ನೋಡಿರಿ)

೨. ಸಂಗಮನ ಮಕ್ಕಳಾದ ಹುಕ್ಕ, ಬುಕ್ಕ, ಕಂಪಣ, ಮಾರಪ್ಪ ಮತ್ತು ಮುದ್ದಪ್ಪ ಎಂಬ ಐದು ಜನರು ತಮ್ಮನ್ನು ತಾವು ಯಾದವರು ಮತ್ತು ಪಂಚಪಾಂಡವರು ಎಂದು ತಿಳಿದುಕೊಂಡಿದ್ದರು. ಅವರಲ್ಲಿ ಮಾರಪ್ಪನು ಹಾಕಿಸಿದ ಶಾಸನದಲ್ಲಿ(ಕ್ರಿ.ಶ.೧೩೪೭, ಇ.ಸಿ.ವೊಲುಮ್ ೮, ಎಸ್.ಬಿ.೩೭೫) "ಹಂಪಿ ವಿರುಪಾಕ್ಷನು ಸಂಗಮ ವಂಶದ ಕುಲದೈವವೆಂದೂ ಮತ್ತು ಕುಟುಂಬ ದೇವರೆಂದೂ" ಹೇಳಿಕೊಂಡಿದ್ದಾನೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕುಲದೈವ ಪರಂಪರೆ ಪ್ರಾಚೀನ ಜನಾಂಗವಾದ ಕುರುಬರಲ್ಲಿ ಮಾತ್ರ ಕಂಡು ಬರುತ್ತದೆ. ಕುರುಬರ ಕುಲದೈವ ಬೀರಪ್ಪನಂತೆ ಇತರ ಜನಾಂಗದಲ್ಲಿ ಕುಲದೈವಗಳು ಕಂಡು ಬರುವುದಿಲ್ಲ.

೩. ಹಂಪಿಯ ವಿರುಪಾಕ್ಷ ದೇವಾಲಯದ ಮಹಾರಂಗ ಮಂಟಪದ ಮಾಡಿನಲ್ಲಿ ವಿಜಯನಗರ ಕಾಲದ ದೇಸಿ ಬಣ್ಣದಲ್ಲಿ ಬರೆದ ಚಿತ್ರಗಳನ್ನು ಕಾಣುತ್ತೇವೆ. ಇವುಗಳಲ್ಲಿ ಒಂದು ವಿರುಪಾಕ್ಷನ ಚಿತ್ರವಿದೆ. ಈ ಚಿತ್ರದಲ್ಲಿ ವಿರುಪಾಕ್ಷನು ಅಗ್ನಿಗಣ್ಣಿನಿಂದ ದೃಷ್ಠಿಸುತ್ತಿದ್ದಾನೆ. ಕುರುಬರ ಬೀರಪ್ಪನ ನೇತ್ರಗಳನ್ನು ನೆನಪಿಸುವ ಈ ಚಿತ್ರವನ್ನು ಕೆಂಡಗಣ್ಣಪ್ಪ ಎಂದು ಕರೆಯಲಾಗುತ್ತದೆ. ಬೀರಪ್ಪನ ಇನ್ನೊಂದು ಹೆಸರು ಕೆಂಡಗಣ್ಣಸ್ವಾಮಿ.(ಚಿತ್ರ ನೋಡಿರಿ)

೪. ಕುರುಬರ ಬೀರದೇವರಿಗೆ ಪ್ರತಿ ಊರಲ್ಲಿ,
ಊರಿನ ಹೊರಗಡೆ ಒಂದು ದೇವಾಲಯವಿರುತ್ತದೆ. ಇದಕ್ಕೆ ಹೋರ ಬೀರಪ್ಪನ ಗುಡಿ ಎಂದು ಕರೆಯುತ್ತಾರೆ. ಇಲ್ಲಿ ಈಶ್ವರರೂಪಿ ಮೂರು ಲಿಂಗದ ಕಲ್ಲುಗಳನ್ನು ನೋಡಬಹುದು. ಇವುಗಳ ಎದುರಿಗೆ ಮೂರು ಬಸವನ ಮೂತಿ೯ಗಳಿರುತ್ತವೆ. ಇದೇ ವ್ಯವಸ್ಥೆಯು ಹಂಪಿಯ ಕೆಲವು ದೇವಾಲಯಗಳಲ್ಲಿ ಕಂಡುಬರುತ್ತದೆ. ಅಲ್ಲಿ ಮೂರು ಲಿಂಗಗಳು ಮತ್ತು ಮೂರು ನಂದಿಗಳನ್ನು ಕಾಣುತ್ತೇವೆ.(ಚಿತ್ರ ನೋಡಿರಿ)

೫. ಹಂಪಿಯ ವಿರುಪಾಕ್ಷ ಕುರುಬರ ಬೀರದೇವರು ಎನ್ನುವುದಕ್ಕೆ ಒಂದು ಬಲವಾದ ಸಾಕ್ಷಿ ಏನಂದರೆ, ಹಂಪಿ ವಿರುಪಾಕ್ಷನ ಜಾತ್ರೆ ಬೀರದೇವರ ಜಯಂತಿ ದಿನವಾದ ಚೈತ್ರದ ಪೂಣಿ೯ಮೆಯ ದಿನದಂದು ನಡೆಯುತ್ತದೆ. ಈ ದಿನ ಹನುಮನ ಜಯಂತಿಯೂ ಇದ್ದು, ಆಂಜನೆಯ ಮತ್ತು ಬೀರಪ್ಪ(ವಿರುಪಾಕ್ಷ) ಇವೆರಡೂ ವಿಜಯನಗರದ ಕ್ಷೇತ್ರದೇವತೆಗಳಾಗಿವೆ.(ಚಿತ್ರ ನೋಡಿರಿ)

೬. ಕುರುಬರ ಮದುವೆಯ ಕಾಯ೯ಕ್ರಮವನ್ನು ನೋಡಿದ್ದೀರಾ? ಅದರಲ್ಲಿಯೂ ಉತ್ತರ ಮತ್ತು ದಕ್ಷಿಣ ಕನಾ೯ಟಕದ ಮದುವೆಗಳಲ್ಲಿ ತಪ್ಪದೆ ಒಂದು ಆಚರಣೆ ನಡೆಯುತ್ತದೆ. ಇದಕ್ಕೆ ಫಲಪೂಜೆ ಎಂದು ಕರೆಯಲಾಗುತ್ತದೆ. ಅದರ ವಿವರ ಇಂತಿದೆ.
"ಫಲಪೂಜೆ"
ಹಾಲುಮತಸ್ಥರ ಮದುವೆಗಳಲ್ಲಿ  ಕಂಡುಬರುವ ಒಂದು ಆಚರಣೆಯಾಗಿದೆ. ಮುಹೂತ೯ದಲ್ಲಿ ತಾಳಿ ಕಟ್ಟಿಸಿದ ನಂತರ ಗಂಡು ಹೆಣ್ಣುಗಳಿಂದ ಫಲಪೂಜೆ ಮಾಡಿಸುತ್ತಾರೆ. ಐದು ಎಳ ನೀರಿನ ಫಲಗಳನ್ನು ಕಂಬಳಿ ಗದ್ದುಗೆ ಮೇಲಿಟ್ಟು ಗಂಡು ಹೆಣ್ಣುಗಳಿಂದ ಪೂಜೆ ಮಾಡಿಸುತ್ತಾರೆ. ಇದರಲ್ಲಿ ಒಂದು ಗಂಡಿನ ಕಡೆಯ ದೇವರಿಗೆ, ಇನ್ನೊಂದು ಹೆಣ್ಣಿನ ಕಡೆಯ ದೇವರಿಗೆ ಅಪಿ೯ಸುತ್ತಾರೆ. ಎರಡೂ ಕಡೆಯ ಗುಡಿಗೌಡರಿಗೆ ತಲಾ ಒಂದೊಂದು ಮತ್ತು ಪುರೋಹಿತ(ಒಡೆಯರು)ರಿಗೆ ಒಂದನ್ನು ಕೊಡಲಾಗುತ್ತದೆ. ಇದಾದ ನಂತರ ಆರತಕ್ಷತೆಗೆ ವದುವರರನ್ನು ಕರೆದೊಯ್ಯಲಾಗುತ್ತದೆ.
ಇದು ಕುರುಬರ ಪ್ರಾಚೀನ ದೈವಗಳಾದ ಮೈಲಾರಲಿಂಗ ಮತ್ತು ಬೀರಪ್ಪರ ಮದುವೆ ಸಂದಭ೯ಗಳಲ್ಲಿಯೂ ನಡೆಯುತ್ತದೆ. ಬೀರಪ್ಪನ ಒಂದು ಪರಿವತಿ೯ತ ರೂಪವಾದ ಹಂಪಿಯ ವಿರುಪಾಕ್ಷನ ಮದುವೆ ಸಂದಭ೯ದಲ್ಲಿಯೂ ಈ ಆಚರಣೆಯನ್ನು ಮಾಡಲಾಗುತ್ತದೆ. ವಿರುಪಾಕ್ಷ ಮತ್ತು ಪಂಪಾಂಬಿಕೆಯರ ವಿವಾಹ ನಿಶ್ಚಿತಾಥ೯ದಲ್ಲಿ ಈ ಆಚರಣೆ ವಿಜ್ರಂಭಣೆಯಿಂದ ಜರುಗುವುದನ್ನು ಹಂಪಿಯ ಮತ್ತು ಬಳ್ಳಾರಿಯ ಜನರು ಅರಿತಿದ್ದಾರೆ.(ಚಿತ್ರ ನೋಡಿರಿ)

೭. ಹಂಪಿಯ ವಿರುಪಾಕ್ಷ ಕುರುಬರ ಬೀರಪ್ಪ ಎನ್ನುವುದಕ್ಕೆ ಇನ್ನೂ ಒಂದು ಬಲವಾದ ಸಾಕ್ಷಿ ಎಂದರೆ, ವಿರುಪಾಕ್ಷನ ದೇವಾಲಯದ ಲ್ಲಿ ನೇತು ಹಾಕಿರುವ ಡೊಳ್ಳು. ಇದು ಬೀರದೇವರ ರಣವಾದ್ಯ. ಇದಕ್ಕೆ ದೇವದುಂದುಬಿ ಎಂದು ಕರೆಯುತ್ತಾರೆ. ಇದು ಕನಾ೯ಟಕದ ಬೇರೆ ಯಾವುದೇ ದೇವರ ದೇವಾಲುಯದಲ್ಲಿ ಕಂಡುಬರುವುದಿಲ್ಲ.(ಚಿತ್ರ ನೋಡಿರಿ)

೮. ವಿರುಪಾಕ್ಷನ ದೇವಾಲಯದಲ್ಲಿ ಕಂಡುಬರುವ ಇನ್ನೊಂದು ಪ್ರಾಚೀನ ವಾದ್ಯವೆಂದರೆ ನಗಾರಿಯಾಗಿದೆ. ಇದು ಕಲ್ಲಿನಿಂದ ಮಾಡಲ್ಪಟ್ಟಿದ್ದು ಇದನ್ನು ಬಾರಿಸಲು ಕಲ್ಲಿನ ಸ್ಟಾಂಡ್ ಕೂಡ ಇಲ್ಲಿದೆ. ಇದರ ವಿಶೇಷವೆಂದರೆ ಇದು ಪ್ರಾಚೀನ ಪಶುಪಾಲಕರ ವಾದ್ಯ. ಕನಾ೯ಟಕದ ಎಲ್ಲ ಮೈಲಾರನ ದೇವಾಲಯಗಳಲ್ಲಿ ಇದು ಕಂಡು ಬರುತ್ತದೆ. ಬೀರಪ್ಪ ಮೈಲಾರ ಎರಡೂ ದೇವರುಗಳು ಭೈರವನ ರೂಪಗಳಾಗಿವೆ.(ಚಿತ್ರ ನೋಡಿರಿ)

೯. ವಿರುಪಾಕ್ಷನಿಗೆ ತೊಡಿಸುವ ಸುವಣ೯ ಮುಖವಾಡವು ಥೇಟ್ ಬೀರಪ್ಪನ ಉಗ್ರ ಮುಖದಂತಿದೆ. ಇಲ್ಲಿ ಪಶುಪಾಲಕರಾದ ಕುರುಬರ ದೈವ ಉಗ್ರನೇತ್ರನಾಗಿದ್ದು ವಿರೂಪ ಅಕ್ಷ= ಕೆಂಡಗಣ್ಣಿನವನಾಗಿದ್ದಾನೆ. ಇವನೆ ವಿಜಯನಗರ ಸಾಮ್ರಾಜ್ಯದ ಅದಿಪತಿ! ಇವನ ಹೆಸರಿನಲ್ಲಿಯೇ ರಾಜ್ಯಾಧಿಕಾರ ನಡೆಯುತ್ತಿತ್ತು. ಈ ವ್ಯವಸ್ಥೆಯು ಭಾರತದ ಇತರ ಸಾಮ್ರಾಜ್ಯಗಳ ವ್ಯವಸ್ಥೆಯಲ್ಲಿ ಕಂಡು ಬರುವುದಿಲ್ಲ.(ಚಿತ್ರ ನೋಡಿರಿ)

೧೦. ಹಂಪಿಯ ವಿರುಪಾಕ್ಷ ಪಶುಪಾಲಕರ ದೈವ, ಅವನ ಮೂಲಭಕ್ತರು ಪಶುಪಾಲಕರು(ಕುರುಬರು)ಎಂದು ಸ್ವತಃ ವಿದ್ಯಾರಣ್ಯರ ಸಹೋದರರಾದ ಸಾಯಣರು ತಮ್ಮ ಒಂದು ಕೃತಿಯಲ್ಲಿ ಹೇಳಿದ್ದಾರೆ. ಸಾಯಣರು ವೇದಗಳಿಗೆ ಭಾಷ್ಯ ಬರೆಯುತ್ತ ಹೀಗೆ ಹೇಳುತ್ತಾರೆ.
"ಯಾ ಗಾವಃ ಸರೂಪಾಃ ಸಮಾನರೂಪಾ
ಯಾಶ್ವ ವಿರೂಪಾ ವಿಭಿನ್ನರೂಪಾ
ಯಾಶ್ಚ್ಯೆಕರೂಪಾ ಏಕೇ ನೈವ ವಣೇ೯ನು ಪೇತಾ
ಯಾಸಂಚ ಗವಾಂ ನಮಾ ನೀಡೇ ರಂತೆ ದಿತಾ
ಇತ್ಯಾದೀ ನಿಷ್ಟ್ಯಾ ಯಾಗೇನ ಹೇತು೯ನಾ೯ಗ್ನಿ ವೇದ ಜನಾತಿ ಯಾಶ್ಚಗಾ ಅಂಗಿರಸ ಋಷಯಸ್ತಪಸಾ ಪಶುಪ್ರಾಪ್ತಿ ಸಾಧನೇನ
ಚಿತ್ರಾಯಾಗಾದಿ ಲಕ್ಷಣೇ ನೇ ಹಾಸ್ಮಿಂಲ್ಲೋಕೇ ಚಿಕ್ರುಃ ಕೃತವಂತಃ
ತಾಭ್ಯಂ ಸವಾ೯ಭ್ಯೋ ಗೋಭ್ಯೋ ಹೇ ಪಜ೯ನ್ಯ ಮಹಿ ಮಚ್ಚಮ೯ ಸುಖಂ ಯಚ್ಛ ಪ್ರದೇಹಿ" (ಋಗ್ವೇದ ಸಂಹಿತಾ ೧೦ನೆಯ ಮಂಡಲ ಸೂಕ್ತ ೧೬೯).

ಇದರ ಕನ್ನಡ ಅಥ೯ವನ್ನು ಆಳ್ಲ ಚಿರಂಜೀವಿಯವರು ಹೀಗೆ ವಿವರಿಸಿದ್ದಾರೆ.
"ಕೆಲವು ಪಶುಗಳು(ಗೋವು) ಚಿಕ್ಕದಾಗಿಯೂ ಮತ್ತೆ ಕೆಲವು ದೊಡ್ಡದಾಗಿಯೂ ಒಂದೆ ಬಣ್ಣದಿಂದ ಕೂಡಿದ್ದಾಗಿಯೂ ಹಲವು ವಿವಿಧ ರೂಪಗಳಿಂದಲೂ ಒಂದೇ ಸಮನಾದ ಆಕಾರವುಳ್ಳದ್ದಾಗಿಯೂ ಇರುತ್ತವೆ. ಇವುಗಳ ಹೆಸರುಗಳನ್ನು ಅಗ್ನಿಯು ತನ್ನ ಕಣ್ಣುಗಳಿಂದ ಎಂದರೆ ಯಾಗಸಾಮಥ್ಯ೯ದಿಂದ ಸೃಷ್ಟಿಯಾಗಿರುವ ಈ ಗೋವುಗಳನ್ನು ಪಜ೯ನ್ಯನು ರಕ್ಷಿಸಲಿ. ಇಲ್ಲಿ ವಿವಿಧ ರೂಪಗಳನ್ನು ಹೊಂದಿರುವ ಗೋವುಗಳಿಗೆ " ವಿರೂಪಾ" ಎಂದು ಅಥೈ೯ಸಲಾಗಿದ್ದು, ಇವುಗಳ ಸ್ವರೂಪವನ್ನು ಅರಿಯುವ ಅಗ್ನಿಯು ವಿರುಪಾಕ್ಷನೆನ್ನಿಸಿಕೊಳ್ಳುತ್ತಾನೆ(ಆಳ್ಲ ಚಿರಂಜೀವಿ, ಸಾಯಣ ಭಾಶ್ಯ ಮತ್ತು ತಂತ್ರದಲ್ಲಿ ವಿರುಪಾಕ್ಷ, ಹಂಪಿ ಪರಂಪರೆ).
ಆದ್ದರಿಂದ ವಿರುಪಾಕ್ಷ ಎಂಬ ಹೆಸರು ಪಶುಪಾಲನೆ ಮತ್ತು ಅವುಗಳ ಸ್ವರೂಪಕ್ಕೆ ಸಂಬಂಧವನ್ನು ಕಲ್ಪಿಸುತ್ತದೆ. ಆದ್ದರಿಂದ ಪಶುಪಾಲಕರ ದೈವ ಅಂದರೆ ಪಶುರಕ್ಷಕ ದೈವ ಬಿರುಪಾನು ವಿರುಪಾಕ್ಷನಾಗಿ ಉನ್ನಯನಗೊಂಡಿರುವುದರಲ್ಲಿ ಅನುಮಾನವೇ ಇಲ್ಲ. ಅವನು ಕುರುಬರ ದೈವವೇ ಹೊರತು ಇತರರ ದೈವವಲ್ಲ.

೧೧. ಈ ಸಾಮ್ರಾಟರ ಎಲ್ಲ ಸುವಣ೯ ನಾಣ್ಯಗಳಲ್ಲಿ ಉಮಾಮಹೇಶ್ವರ(ವಿಠಲೇಶ್ವರ- ಬೀರಪ್ಪ) ಕಂಡುಬರುತ್ತಾನೆ. ಇದು ಕುರುಬರಿಗೆ ಹೆಮ್ಮೆಯ ವಿಚಾರವಾಗಿದೆ. ಪಟ್ಟಣ ಕಡೋಲಿಯ ಕುರುಬರ ಇಟಲ ಬೀರಪ್ಪರು ಈ ನಾಣ್ಯದ ಮೇಲೆ ರಾರಾಜಿಸುತ್ತಿದ್ದಾರೆ.(ಚಿತ್ರ ನೋಡಿರಿ)

೧೨. ವಿರುಪಾಕ್ಷನ ದೇವಾಲಯದ ಕಂಬಗಳ ಮೇಲೆ ನಾಲ್ಕು ಕುರುಬನ ಚಿತ್ರಗಳಿವೆ. ತಲೆಮೇಲೆ ಕಂಬಳಿ ಹೊದ್ದು, ಕೈಯಲ್ಲಿ ಕುರುಬಗೋಲನ್ನು ಹಿಡಿದು "ರಕ್ಷಣಾ ದೇವತೆ" ಯಂತೆ ಕಾಣುವ ಕುರುಬನು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ರಾಜರ ಕುಲ ಪುರುಷನೆಂದು ಇತಿಹಾಸಕಾರರು ಹೇಳುತ್ತಾರೆ. ಕುಲದೈವದ ದೇವಾಲಯದಲ್ಲಿ ಕುಲಪುರುಷನ ಶಿಲ್ಪವಿರುವ ಅಪೂವ೯ ಸಾಕ್ಷಿ ವಿರುಪಾಕ್ಷ ದೇವಾಲಯದಲ್ಲಿದೆ.(ಚಿತ್ರ ನೋಡಿರಿ)

ಮಿತ್ರರೆ,
ಇದು ಹಾಲುಮತ ಹುಕ್ಕಬುಕ್ಕ ಪ್ರತಿಷ್ಟಾನದ ವಿದ್ವಾಂಸರ ಧೀಘ೯ಕಾಲದ ಅಧ್ಯಯನದ ಫಲವಾಗಿದೆ.
ಈ ಕುರಿತು ಆರೋಗ್ಯಕರ ಚಚೆ೯ಗೆ ಪ್ರತಿಷ್ಟಾನವು ಆಹ್ವಾನ ನೀಡುತ್ತದೆ.

Comments

Post a Comment

Popular posts from this blog

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆಯನ್ನೊಮ್ಮೆ ಓದಿ

ಸಂಗೊಳ್ಳಿ ರಾಯಣ್ಣ  –  ಬ್ರಿಟಿಷರ  ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ.  ಕಿತ್ತೂರು ಚೆನ್ನಮ್ಮಳ  ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ. ಪರಿಚಯ ಸಂಪಾದಿಸಿ ಬೆಳಗಾವಿ  ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು.  ಬ್ರಿಟಿಷರ  ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು.  ಬ್ರಿಟಿಷರು ಚನ್ನಮ್ಮನನ್ನು  ಬೈಲಹೊಂಗಲದಲ್ಲಿ  ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು.  ಜನವರಿ ೨೬  ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ  ಆಗಸ್ಟ್ ೧೫  ೧೭೯೮ ,  ಭಾರತಕ್ಕೆ  ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ  ಜನವರಿ ೨೬ , ಭಾರತವು  ಗಣರಾಜ್ಯವೆಂದು  ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, “ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ...

ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದವರು.

ಕುರುಬ ಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ ಅರ್ಥವು ಇದೆ. ಕುರುಬ ಜಾತಿಯು ಅತಿ ಪುರಾತನವಾದ ಜಾತಿ.  ಇತಿಹಾಸ ಪೂರ್ವ ಕುರುಬ ಜನಾಂಗ ತುಂಬಾ ಪುರಾತನವಾದ ಜನಾಂಗ , ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿ ಕುರು ವಂಶ ಮತ್ತು ಯದು ವಂಶಗಳ ಪ್ರಸ್ತಾವನೆಯಾಗಿದೆ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲೀದು ಗೆಡ್ಡೆ, ಗೆಣಸು ತಿನ್ನುತಿದ್ದ , ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕ ತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸ ತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ವಕ್ಕಲುತನ ಮಾಡುವನು ವಕ್ಕಲಿಗನಾದ, ಬೇಟೆಯಾಡು ವವನು ಬೇಡನಾದ , ಮಡಿಕೆ ಮಾಡುವವನು ಕುಂಬಾರನಾದ , ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು. ಭಾರತ ಇತಿಹಾಸ . ಕುರುಬರು ಭಾರತದ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ...

ಕುರುಬರ ಇತಿಹಾಸ ತಿಳಿಯಿರಿ

ಕುರುಬರ ಇತಿಹಾಸ ಪರಂಪರೆ, ಭಾಗ ೨೮ ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ ಕುರುಭರು.. ನಾವು ಕುರುಭರು ಕುರುಭರು ಇಚ್ಚಿಸಿದ್ದಲ್ಲಿ ಅವರಿಗೆ ವೈಷ್ಣವ ದೀಕ್ಷೆ ನೀಡುತ್ತೇನೆ :-- ಪೇಜಾವರ ಶ್ರೀ ಪಾದರು , ಉಡುಪಿ ನಿಮ್ಮ ಯಾವ ದೀಕ್ಷೆಯೂ ನಮಗೆ ಬೇಕಾಗಿಲ್ಲ , ಕುರುಭರು ತಾಯಿ ಗರ್ಭದಲ್ಲಿ ಇರುವಾಗಲೇ ದೀಕ್ಷೆ ಪಡೆದವರು :- ಸಿದ್ದರಾಮಯ್ಯ , ಪ್ರಸ್ತುತ ಮುಖ್ಯಮಂತ್ರಿ ವಾಹ್..! ಎಂಥಾ ಮಾತು ಸಿದ್ದರಾಮಯ್ಯ.. ಅಂದು ನನಗೆ ಸಿದ್ದರಾಮಯ್ಯ ಬಹಳವೇ ಇಷ್ಟವಾದರು , ಮನುಷ್ಯ ತನ್ನ ಕುಲದ ಸತ್ ಸಂಪ್ರದಾಯ ಬಿಟ್ಟುಕೊಡಲಿಲ್ಲ ...! ಭೇಷ್ ಎನಿಸಿತು.  ಕುರುಭರ ಇತಿಹಾಸ ತಿಳಿಯಿರಿ. ಕುರುಭರು ಮೂಲತಃ ನಾಗಕುಲದವರು ಎನ್ನಿಸಿಕೊಳ್ಳುವರು , ಪಲ್ಲವರು ಎಂದು ಕರ್ನಾಟಕದಲ್ಲಿ , ಪೊಲಿಯಾರ್ / ಪೊಲಯರ್ ಎಂದು ಕೇರಳದಲ್ಲಿ ಪಲ್ಲಿಗ ಎಂದು ಮಹಾರಾಷ್ಟ್ರದಲ್ಲಿ , ಉತ್ತರ ಭಾರತದೆಡೆ ಹಟ್ಟಿಗಾರರೆಂದು ಗುರುತಿಸಲ್ಪಡುತ್ತಾರೆ‌. ಕುರುಭ ( ಕುರು - ಪರತತ್ವ ಭ - ಗಳಿಸುವವ) ಎಂಬ ದೀಕ್ಷಾ ಪದ್ದತಿ. ಕುರುಭ ಒಂದು ಸಿದ್ದ ಶೈವ ಶಾಖೆ. ಕುರುಭರು ಅರ್ಥಾತ್ ಪಲ್ಲವರು 5-7ನೇ ಶತಮಾನದಲ್ಲಿ ಲಿಂಗ ದರಿಸುತ್ತಿದ್ದರು ಎಂಬ ವಿವರ ಶಾಸನಗಳಲ್ಲಿ ಇದೆ. ಪಲ್ಲವರ ಸಹೋದರ ವಂಶಾವಳಿ ಛಲವಾದಿ ಚಾಳುಕ್ಯ ಮಾದಿಗರು (ಕುರುಭರಲ್ಲಿ ಸಾದರು) ಸಹ ಲಿಂಗದಾರಿಗಳಾಗಿದ್ದ ವಿವರವಿದೆ. 2ನೇ ಶತಮಾನದಲ್ಲಿ ಭಾರತದ ವಂಶಸ್ಥರು ಭಾರ ಕುಲದ ಮಾದಿಗರು ಭಾರಶಿವ ನೆಂಬ ರಾಜ ...